ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಪತ್ನಿ ಹೆಸರಿನಲ್ಲಿ ₹8 ಕೋಟಿ ಸಾಲ, ವೈದ್ಯನ ವಿರುದ್ಧ ಎಫ್‌ಐಆರ್

Last Updated 29 ಮೇ 2022, 16:16 IST
ಅಕ್ಷರ ಗಾತ್ರ

ಬೆಂಗಳೂರು: ಪತ್ನಿಯ ಹೆಸರಿನಲ್ಲಿ ಅಕ್ರಮದಿಂದ ₹ 8 ಕೋಟಿ ಸಾಲ ಪಡೆದಿರುವ ಆರೋಪದಡಿ ವೈದ್ಯ ಸುನೀಲ್‌ಕುಮಾರ್ ಎಂಬುವರ ವಿರುದ್ಧ ರಾಮಮೂರ್ತಿನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ರಾಯಚೂರು ನಿವಾಸಿಯಾಗಿರುವ ವೈದ್ಯೆ, ತಮ್ಮ ಪತಿ ಸುನೀಲ್‌ಕುಮಾರ್ ವಿರುದ್ಧ ದೂರು ನೀಡಿದ್ದರು. ಅದರನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ದಂಪತಿ ನಡುವೆ ಕೌಟುಂಬಿಕ ಭಿನಾಭಿಪ್ರಾಯವಿದೆ. ವೈದ್ಯೆ ತವರು ಮನೆಯಲ್ಲಿದ್ದಾರೆ. ಬೆಂಗಳೂರಿನಲ್ಲಿ ವೈದ್ಯರಾಗಿರುವ ತಮ್ಮ ಪತಿ ಮೇಲೆ ಆರೋಪ ಹೊರಿಸಿದ್ದಾರೆ’ ಎಂದೂ ತಿಳಿಸಿವೆ.

ದೂರಿನ ವಿವರ: ‘ಇಂಡಸ್ ಇಂಡ್ ಬ್ಯಾಂಕ್‌ನ ಬಸವನಗುಡಿ ಶಾಖೆ ಸಿಬ್ಬಂದಿ, ಸಾಲದ ಕಂತು ವಸೂಲಿ ಮಾಡಲೆಂದು ಇತ್ತೀಚೆಗೆ ರಾಯಚೂರಿನಲ್ಲಿರುವ ನಮ್ಮ ಮನೆಗೆ ಬಂದಿದ್ದರು. ನಾನು ಯಾವುದೇ ಸಾಲ ಮಾಡಿಲ್ಲವೆಂದು ಹೇಳಿದ್ದೆ. ಆಗ, ಸಾಲ ನೀಡಿರುವ ಬಗ್ಗೆ ದಾಖಲೆಗಳನ್ನು ನೀಡಿದ್ದರು. ಪರಿಶೀಲಿಸಿದಾಗ, ನನ್ನ ಹೆಸರಿನಲ್ಲಿ ಪತಿಯೇ ಸಾಲ ಮಾಡಿರುವುದು ತಿಳಿಯಿತು’ ಎಂದು ದೂರಿನಲ್ಲಿ ವೈದ್ಯೆ ಹೇಳಿದ್ದಾರೆ.

‘ನನ್ನ ವೈಯಕ್ತಿಕ ದಾಖಲೆ ಹಾಗೂ ಸಹಿ ದುರುಪಯೋಗಪಡಿಸಿಕೊಂಡಿರುವ ಪತಿ, 18 ಕಡೆ ₹ 8 ಕೋಟಿ ಸಾಲ ಮಾಡಿದ್ದಾರೆ. ಈ ಮೂಲಕ ನಂಬಿಕೆ ದ್ರೋಹ ಎಸಗಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ’ ಎಂದೂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT