ಶುಕ್ರವಾರ, ಮೇ 14, 2021
27 °C

ಕತ್ತು ಕೊಯ್ದು ಮಹಿಳೆ ಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಶಾಹಿನಾ ತಾಜ್ (40) ಎಂಬುವರನ್ನು ಶನಿವಾರ ಕತ್ತು ಕೊಯ್ದು ಕೊಲೆ ಮಾಡಲಾಗಿದೆ.

‘ಬೇಗೂರು ಸುಭಾಷ್‌ನಗರದಲ್ಲಿ ಶಾಹಿನಾ ತಾಜ್‌ ಹಾಗೂ ಪತಿ ಚಾಂದ್ ಪಾಷಾ ವಾಸವಿದ್ದರು. ಆಟೊ ಚಾಲಕರಾಗಿದ್ದ ಚಾಂದ್, ಶನಿವಾರ ಬೆಳಿಗ್ಗೆ ಎಂದಿನಂತೆ ಕೆಲಸಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ’ ಎಂದು ಪೊಲೀಸರು ಹೇಳಿದರು.

‘ಮನೆಯಲ್ಲಿ ಶಾಹಿನಾ ಒಬ್ಬರೇ ಇರುವುದನ್ನು ತಿಳಿದುಕೊಂಡ ದುಷ್ಕರ್ಮಿಗಳು, ಮನೆಯೊಳಗೆ ನುಗ್ಗಿದ್ದಾರೆ. ನಂತರ ಶಾಹಿನಾ ಅವರ ಮೇಲೆ ಹಲ್ಲೆ ಮಾಡಿ ಚೂಪಾದ ಆಯುಧದಿಂದ ಕತ್ತು ಕೊಯ್ದಿದ್ದಾರೆ. ತೀವ್ರ ರಕ್ತಸ್ರಾವದಿಂದಾಗಿ ಶಾಹಿನಾ ಸ್ಥಳದಲ್ಲೇ ಮೃಪತಟ್ಟಿದ್ದಾರೆ’ ಎಂದೂ ತಿಳಿಸಿದರು.

‘ಕೆಲಸಕ್ಕೆ ಹೋಗಿದ್ದ ಚಾಂದ್, ರಾತ್ರಿ ಮನೆಗೆ ಬಂದಿದ್ದರು. ಬೆಡ್‌ ಮೇಲೆ ಶಾಹಿನಾ ಮೃತದೇಹವಿತ್ತು. ಅದನ್ನು ನೋಡಿದ್ದ ಅವರು ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಹೋಗಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ’ ಎಂದೂ ಹೇಳಿದರು.

‘ಪರಿಚಯಸ್ಥರೇ ಮನೆಗೆ ಬಂದು ಕೃತ್ಯ ಎಸಗಿ ಪರಾರಿಯಾಗಿರುವ ಅನುಮಾನವಿದೆ. ಮನೆ ಅಕ್ಕ–ಪಕ್ಕದ ಸಿ.ಸಿ.ಟಿ.ವಿ ಕ್ಯಾಮೆರಾ ಡಿವಿಆರ್ ಪಡೆದು ಪರಿಶೀಲನೆ ನಡೆಲಾಗುತ್ತಿದೆ’ ಎಂದೂ ಪೊಲೀಸರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು