ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಸೈಕಲ್‌ ದಿನಾಚರಣೆ ಇಂದು

ರಾಜ್ಯ ಕ್ರೀಡಾ ಇಲಾಖೆ ವತಿಯಿಂದ ರ‍್ಯಾಲಿ
Last Updated 2 ಜೂನ್ 2022, 19:32 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಕ್ರೀಡಾ ಇಲಾಖೆ ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಶುಕ್ರವಾರ ವಿಶ್ವ ಸೈಕಲ್‌ ದಿನಾಚರಣೆ ಅಂಗವಾಗಿ ರಾಜ್ಯದ ವಿವಿಧೆಡೆ ಸೈಕಲ್ ರ್‍ಯಾಲಿ ಆಯೋಜಿಸಿದೆ.

ಬೆಂಗಳೂರಿನಲ್ಲಿ ಈ ರ್‍ಯಾಲಿಗೆ ಸಚಿವರಾದ ಡಾ.ಸಿ.ಎನ್‌.ಅಶ್ವತ್ಥ
ನಾರಾಯಣ, ಮುರುಗೇಶ ನಿರಾಣಿ ಅವರು ವಿಧಾನಸೌಧದ ಮುಂಭಾಗ ಚಾಲನೆ ನೀಡಲಿದ್ದಾರೆ ಎಂದುಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾರಾಯಣಗೌಡ ಅವರು
ತಿಳಿಸಿದರು.

ದೇಶದ 75 ಐತಿಹಾಸಿಕ ಸ್ಥಳಗಳಲ್ಲಿ ಬೈಸಿಕಲ್‌ ರ್‍ಯಾಲಿಗಳು ನಡೆಯಲಿದ್ದು, ನಮ್ಮ ರಾಜ್ಯದ ಏಳು ಐತಿಹಾಸಿಕ ಸ್ಥಳಗಳಾದ ಹಂಪಿ, ಬೇಲೂರು, ರಾಣಿ ಅಬ್ಬಕ್ಕ ಕೋಟೆ, ಗೋಲ್‌ ಗುಂಬಜ್‌, ಮೈಸೂರು ಅರಮನೆ, ಮಲ್ಪೆ ಮತ್ತು ಮಡಿಕೇರಿ ಕೋಟೆಗಳಲ್ಲಿ ಬೈಸಿಕಲ್‌ ರ್‍ಯಾಲಿ ಆಯೋಜಿಸಲಾಗಿದೆ. ‘ನಮ್ಮ– ನಿಮ್ಮ ಸೈಕಲ್‌ ಫೌಂಡೇಷನ್’ ಸಹಯೋಗದಲ್ಲಿ ‘ಲೀಡ್‌ ಬೆಂಗಳೂರು ರೈಡ್‌–2022’ ಆಯೋಜಿಸುತ್ತಿದ್ದು, ಇದರಲ್ಲಿ ಜರ್ಮನಿಯ ವಿವಿಧ ಕಂಪನಿಗಳ ಸಿಇಒಗಳು ಭಾಗವಹಿಸುತ್ತಿದ್ದಾರೆ. ಇದರ ಜೊತೆಗೆ ಸುಮಾರು
200 ಸೈಕಲ್‌ ಸವಾರರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

ಸೈಕಲ್‌ ಬಳಕೆಯಿಂದ ಆರೋಗ್ಯದಲ್ಲಾಗುವ ಉತ್ತಮ ಬದಲಾವಣೆಗಳ ಕುರಿತು ಜನರಲ್ಲಿ ಅರಿವು ಮೂಡಿಸ ಲಾಗುವುದು. ದೈನಂದಿನ ಕಾರ್ಯಚಟುವಟಿಕೆಗಳಿಗೆ ಸೈಕಲ್‌ ಬಳಸಲು ಉತ್ತೇಜನ ನೀಡುವುದೇ ವಿಶ್ವ ಬೈಸಿಕಲ್‌ ದಿನಾಚರಣೆಯ ಉದ್ದೇಶ. ಸೈಕಲ್‌ ಬಳಕೆ ಹೆಚ್ಚಾದಷ್ಟು ಪರಿಸರ ಮಾಲಿನ್ಯ
ತಡೆಗಟ್ಟಬಹುದು. ಟ್ರಾಫಿಕ್ ಸಮಸ್ಯೆಯನ್ನೂ ತಗ್ಗಿಸಬಹುದಾಗಿದೆ. ಆದ್ದರಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೈಕಲ್‌ ಬಳಸಬೇಕು ಎಂದು ನಾರಾಯಣ ಗೌಡ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT