ಬೆಂಗಳೂರು: ವಿಶ್ವ ಒಕ್ಕಲಿಗರ ಪರಿಷತ್ನ 18ನೇ ಮಹಾಸಮ್ಮೇಳನ ಅಮೆರಿಕದ ಸ್ಯಾನ್ ಹೋಸೆ ನಗರದ ‘ಸ್ಯಾನ್ ಹೋಸೆ ಮೆಕನರಿ ಕನ್ವೆನ್ಷನ್ ಸೆಂಟರ್‘ನಲ್ಲಿ ಜುಲೈ 3ರಿಂದ 5ರವರೆಗೆ ನಡೆಯಲಿದೆ.

ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಶಾಸಕ ಸಿ.ಎನ್. ಅಶ್ವತ್ಥನಾರಾಯಣ, ಸಂಸದ ಡಾ. ಸುಧಾಕರ್, ಶಾಸಕರಾದ ಸಿ.ಎಸ್. ಪುಟ್ಟರಾಜು, ಎಸ್.ಟಿ. ಸೋಮಶೇಖರ್ ಪಾಲ್ಗೊಳ್ಳಲಿದ್ದಾರೆ. ಸಚ್ಚಿದಾನಂದ, ಜಯರಾಮ ರಾಯಪುರ ಹಾಗೂ ಫಸ್ಟ್ ಸರ್ಕಲ್ ತಂಡದ ಸದಸ್ಯರು ಭಾಗವಹಿಸುತ್ತಿದ್ದಾರೆ ಎಂದು ಪರಿಷತ್ತಿನ ಅಧ್ಯಕ್ಷ ಧನಂಜಯ ಕೆಂಗಯ್ಯ ತಿಳಿಸಿದ್ದಾರೆ.

ಪ್ರತಿಭೆಗಳಾದ ಅನೀಶ್ ವಿದ್ಯಾಶಂಕರ್, ದಿವ್ಯಾ ರಾಮಚಂದ್ರ ಸಮಾರಂಭಕ್ಕೆ ಮೆರುಗು ನೀಡಲಿದ್ದಾರೆ. ವಿವಿಧ ಸಾಂಸ್ಕೃತಿಕ ಕಲಾ ತಂಡಗಳಿಂದ ಮನೋರಂಜನಾ ಕಾರ್ಯಕ್ರಮಗಳು ಜರುಗಲಿವೆ. ಭಾವಗೀತ ಮತ್ತು ಚಿತ್ರಗೀತೆಗಳ ಭಾವನಾತ್ಮಕ ಸಂಗೀತ ಸಂಜೆ ಇರಲಿದೆ. ಹಾಸ್ಯ ನಾಟಕಗಳ ಪ್ರದರ್ಶನ ಇರಲಿದೆ ಎಂದು ಮಾಹಿತಿ ನೀಡಿದ್ದಾರೆ.

ಸಿಂಗಲ್ಸ್ ಮೀಟ್, ಬಿಸಿನೆಸ್ ಫೋರಂ, ಯಂಗ್ ಎಂಟರ್ಪ್ರನರ್ ಫೋರಂ, ಮಹಿಳಾ ಹಾಗೂ ಆರೋಗ್ಯ ಫೋರಂ, ಕರ್ನಾಟಕದ ಸಂಸ್ಕೃತಿ ಮತ್ತು ಪರಂಪರೆಯ ವೈಭವವನ್ನು ತೋರಿಸುವ ಸಾಂಸ್ಕೃತಿಕ ಮೆರವಣಿಗೆ, ವಿಶಿಷ್ಟ ಗೌಡ್ರು ಊಟ, ಜಾಗತಿಕ ಒಕ್ಕಲಿಗ ನೆಟ್ವರ್ಕಿಂಗ್ ಕಾರ್ಯಕ್ರಮಗಳಿರಲಿವೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.