‘ರಸ್ತೆಯ ಮೇಲೆ ಕೊಳಚೆನೀರು ಹರಿಯುತ್ತಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿಲ್ಲ. ಅಲ್ಲದೆ ಸಮಸ್ಯೆಯ ಕುರಿತು ಇದುವರೆಗೂ ಯಾವುದೇ ದೂರು ಸಹ ಸಲ್ಲಿಕೆಯಾಗಿಲ್ಲ. ಶೀಘ್ರದಲ್ಲೇ ಸ್ಥಳ ಪರಿಶೀಲನೆ ನಡೆಸಿ ಕೊಳಚೆನೀರು ಹರಿಸುತ್ತಿರುವುದು ಕಂಡುಬಂದರೆ ಸಂಬಂಧಪಟ್ಟವರಿಗೆ ನೋಟಿಸ್‌ನೀಡಿ ಸಮಸ್ಯೆ ಬಗೆಹರಿಸಲಾಗುವುದು’ ಎಂದು ಜಲಮಂಡಳಿಯ ಸಹಕಾರ ನಗರ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಜಶೇಖರ್ ಮೇಟಿ ಹೇಳಿದರು.
ರಸ್ತೆಯ ಪಕ್ಕದಲ್ಲಿರುವ ತ್ಯಾಜ್ಯ
ಪ್ರಸ್ತಾವ ಸಲ್ಲಿಕೆ
ಮನೆ ತ್ಯಾಜ್ಯ ಕಟ್ಟಡ ತ್ಯಾಜ್ಯ ಹಾಕುವವರನ್ನು ನಿಯಂತ್ರಿಸಲು ರಸ್ತೆಯಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಈ ಹಿಂದೆ ಬಿಬಿಎಂಪಿಗೆ ಪ್ರಸ್ತಾವ ಸಲ್ಲಿಸಲಾಗಿತ್ತು. ಈಗ ಬೆಂಗಳೂರು ಉತ್ತರ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಬಿಎಸ್‌ಡಬ್ಲ್ಯುಎಂಲ್‌ನ ಸಹಾಯಕ ಪ್ರಧಾನ ವ್ಯವಸ್ಥಾಪಕ ತೀರ್ಥಪ್ರಸಾದ್ ತಿಳಿಸಿದರು.