ಬೆಂಗಳೂರು: ಆಟೊ ಎಲ್ಪಿಜಿ ದರ ಹೆಚ್ಚಳವನ್ನು ವಿರೋಧಿಸಿ ಸಿಐಟಿಯು ಆಟೊ ರಿಕ್ಷಾ ಚಾಲಕರ ಸಂಘಟನೆಯ ಸದಸ್ಯರು ಸೋಮವಾರ ನಗರದ ಮೈಸೂರು ಬ್ಯಾಂಕ್ ವೃತ್ತದ ಬಳಿ ಪ್ರತಿಭಟನೆ ನಡೆಸಿದರು.

ಆಟೊ ಎಲ್ಪಿಜಿ ದರವನ್ನು ಸರ್ಕಾರ ಪ್ರತಿ ಲೀಟರ್ಗೆ 48.88 ರೂಪಾಯಿಯಿಂದ 55.68 ರೂಪಾಯಿಗೆ ಹೆಚ್ಚಳ ಮಾಡಿದೆ. ಇದರಿಂದ ಪ್ರತಿ ಲೀಟರ್ ಎಲ್ಪಿಜಿ ದರ ಆರು ರೂಪಾಯಿ 80 ಪೈಸೆ ಹೆಚ್ಚಳಗೊಂಡಂತೆ ಆಗಿದೆ.
ಈ ದರ ಹೆಚ್ಚಳ ಆಟೊ ಚಾಲಕರಿಗೆ ಹೊರೆಯಾಗಲಿದೆ. ಸರ್ಕಾರ ಎಲ್ಪಿಜಿ ದರವನ್ನು ಇಳಿಸುವ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾ ನಿರತರು ಆಗ್ರಹಿಸಿದರು.

`ಆಟೊ ಎಲ್ಪಿಜಿಯ ದರದ ಏರಿಕೆಯಿಂದ ಆಟೊ ರಿಕ್ಷಾ ಚಾಲಕರ ಜೀವನ ನಿರ್ವಹಣೆಯೇ ಕಷ್ಟವಾಗಲಿದೆ. ಸರ್ಕಾರ ಬಡ ಆಟೊ ರಿಕ್ಷಾ ಚಾಲಕರ ಬಗ್ಗೆ ಕನಿಷ್ಠ ಸಹಾನುಭೂತಿಯೂ ಇಲ್ಲದೇ ಎಲ್ಪಿಜಿ ದರ ಹೆಚ್ಚಳ ಮಾಡಿದೆ. ಸರ್ಕಾರದ ದರ ಏರಿಕೆಯು ಅವೈಜ್ಞಾನಿಕವಾಗಿದ್ದು, ಸರ್ಕಾರ ದರ ಏರಿಕೆಯನ್ನು ಪುನರ್ ಪರಿಶೀಲಿಸಬೇಕು~ ಎಂದು ಸಂಘಟನೆಯ ಉಪಾಧ್ಯಕ್ಷ ರುದ್ರಮೂರ್ತಿ ಅವರು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.