2015–16ನೇ ಸಾಲಿನಲ್ಲಿ, ಪಾಲಿಟೆಕ್ನಿಕ್ ಡಿಪ್ಲೊಮಾ ಸೆಮಿಸ್ಟರ್ಗಳ ಪಠ್ಯಕ್ರಮಗಳಲ್ಲಿ ‘ಫಲಿತಾಂಶ ಆಧಾರಿತ ಪಠ್ಯಕ್ರಮ’ವನ್ನು ತಾಂತ್ರಿಕ ಶಿಕ್ಷಣ ಇಲಾಖೆ ಅಳವಡಿಸಿಕೊಂಡಿತ್ತು. ಮೂರು ವರ್ಷದಿಂದ ಈ ಪಠ್ಯಕ್ರಮ ಅಧ್ಯಯನ ನಡೆಸಿರುವ ಡಿಪ್ಲೊಮಾ ವಿದ್ಯಾರ್ಥಿಗಳು ವ್ಯಾಸಂಗ ಮುಂದುವರಿಸಲು (ಲ್ಯಾಟರಲ್ ಎಂಟ್ರಿ ಮೂಲಕ ಬಿ.ಇ) ಅನುಕೂಲವಾಗುವಂತೆ ಇದೇ ಪಠ್ಯಕ್ರಮದ ಅನ್ವಯ ಡಿಸಿಇಟಿ ನಡೆಸಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿತ್ತು.