ಬೆಂಗಳೂರು: ಬಿಲ್ ಜಾಸ್ತಿಯಾಯಿತು ಎಂದು ಆರೋಪಿಸಿ ಐದು ಮಂದಿಯ ಗುಂಪೊಂದು ಬಾರ್ ಮತ್ತು ರೆಸ್ಟೊರೆಂಟ್ ಸಿಬ್ಬಂದಿಯೊಂದಿಗೆ ತಕರಾರು ತೆಗೆದು ನಾಲ್ಕು ಜನರನ್ನು ಗಾಯಗೊಳಿಸಿದ ಘಟನೆ ನಗರದ ಕೊಡಿಗೆಹಳ್ಳಿಯಲ್ಲಿ ಬುಧವಾರ ರಾತ್ರಿ ಸಂಭವಿಸಿದೆ.

ಗಾಯಾಳುಗಳನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಸಾಗಿಸಿ ಅಲ್ಲಿ ಚಿಕಿತ್ಸೆ ನೀಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಮ್ಮಗೊಂಡನಹಳ್ಳಿಯ ಫ್ರಾಂಕ್ಲಿನ್, ಜಾಕೋಬ್, ಜಾನ್ ರಾಬರ್ಟ್, ಸುಮನ್ ಮತ್ತು ರಾಘ ಎಂಬುವವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಫ್ರಾಂಕ್ಲಿನ್ ತನ್ನ ನಾಲ್ಕು ಮಂದಿ ಸ್ನೇಹಿತರನ್ನು ರಾತ್ರಿ 9ರ ಸುಮಾರಿಗೆ ಭದ್ರಪ್ಪ ಬಡಾವಣೆಯ ಬಾಲಾಜಿ ಬಾರ್ಗೆ ಕರೆದೊಯ್ದಿದ್ದಾನೆ. ಬಾರ್ ಸಿಬ್ಬಂದಿ ಆತನಿಗೆ ರೂ 900 ಮೊತ್ತದ ಬಿಲ್ ನೀಡಿದಾಗ ಆ ಮೊತ್ತವನ್ನು ನೀಡಲು ನಿರಾಕರಿಸಿ ಬಾರ್ ಮಾಲೀಕರೊಂದಿಗೆ ಜಗಳಕ್ಕಿಳಿದಿದ್ದಾನೆ. ಆಗ ಸಿಬ್ಬಂದಿ ಇವರನ್ನು ಸುತ್ತುವರೆದಿದ್ದಾರೆ. ತನ್ನ ಸಹೋದರ ಹಾಗೂ ಸ್ನೇಹಿತರೊಂದಿಗೆ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.