ಬೆಂಗಳೂರಿನ ಸೌಂದರ್ಯ ಕಾಪಾಡಿಕೊಳ್ಳಿ
`ಮಧ್ಯಪ್ರದೇಶದವನಾದ ನನ್ನ ದೃಷ್ಟಿಯಲ್ಲಿ ಬೆಂಗಳೂರು ಸುಂದರ ನಗರ. ಕರ್ನಾಟಕ ಉತ್ತಮ ರಾಜ್ಯ. ಬೆಳವಣಿಗೆಯ ಭರಾಟೆಯಲ್ಲಿ ಬೆಂಗಳೂರಿನ ಸೌಂದರ್ಯ ಹಾಳಾಗದಂತೆ ಎಚ್ಚರ ವಹಿಸಿ. ವ್ಯವಸ್ಥಿತವಾಗಿ ವೈಜ್ಞಾನಿಕವಾಗಿ ಬೆಳವಣಿಗೆ ಆಗುವಂತೆ ನೋಡಿಕೊಳ್ಳಿ.~
- ಕಮಲ್‌ನಾಥ್, ಕೇಂದ್ರ ನಗರಾಭಿವೃದ್ಧಿ ಸಚಿವ

ಗರಿಷ್ಠ ಪ್ರಯೋಜನ ಪಡೆದುಕೊಳ್ಳಿ
`ನಾಗರಿಕರು ಸುರಕ್ಷತೆಗೆ ಸಂಬಂಧಿಸಿದಂತೆ ಮೆಟ್ರೊ ನಿಗಮ ವಿಧಿಸಿರುವ ನಿಬಂಧನೆಗಳನ್ನು ಪಾಲಿಸಬೇಕು. ನಿಲ್ದಾಣ ಮತ್ತು ರೈಲುಗಳ ಒಳಗೆ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಮೆಟ್ರೊದ ಗರಿಷ್ಠ ಪ್ರಯೋಜನ ಪಡೆದುಕೊಳ್ಳಬೇಕು~
- ಡಿ.ವಿ.ಸದಾನಂದಗೌಡ, ಮುಖ್ಯಮಂತ್ರಿ

ಪ್ರಾಣತೆತ್ತ ಕಾರ್ಮಿಕರಿಗೆ ನಮನ
ಮೆಟ್ರೊ ಕನಸು ನನಸಾಗಲು ಹಗಲು ರಾತ್ರಿ ದುಡಿದಿದ್ದಲ್ಲದೇ ತಮ್ಮ ಪ್ರಾಣವನ್ನೂ ಕಳೆದುಕೊಂಡ ಕಾರ್ಮಿಕರಿಗೆ ನನ್ನ ಅನಂತ ನಮನಗಳು.
- ಎಸ್.ಸುರೇಶಕುಮಾರ್, ಕಾನೂನು ಸಚಿವ

ಮೆಟ್ರೊ ಬಳಕೆ ಹೆಚ್ಚಾಗಲಿ
ದ್ವಿಚಕ್ರ ವಾಹನ, ಕಾರುಗಳ ಬಳಕೆಯನ್ನು ಸಾಧ್ಯವಾದ ಮಟ್ಟಿಗೆ ಕಡಿಮೆ ಮಾಡಬೇಕು. ಮೆಟ್ರೊ ಖಾಸಗಿ ವಾಹನದಷ್ಟೇ ಆರಾಮದಾಯಕ ಅನುಭವ ನೀಡುತ್ತದೆ. ಈ ಹಿನ್ನೆಲೆಯಲ್ಲಿ ಮೆಟ್ರೊ ಬಳಕೆಗೆ ಹೆಚ್ಚು ಜನ ಮುಂದಾಗಬೇಕು.
- ಜ್ಯೋತಿ ಪ್ರಕಾಶ್ ಮಿರ್ಜಿ, ನಗರ ಪೊಲೀಸ್ ಕಮಿಷನರ್

ನಮ್ಮ ಮೆಟ್ರೊ ನಮ್ಮ ಆಸ್ತಿ. ಅದರ ರಕ್ಷಣೆ ನಮ್ಮ ಕರ್ತವ್ಯ. ಸಾರ್ವಜನಿಕರು ಯಾವುದೇ ತೊಂದರೆ ಉಂಟಾಗದ ರೀತಿಯಲ್ಲಿ ಈ ಸೌಲಭ್ಯವನ್ನು ಬಳಸಿಕೊಳ್ಳಬೇಕಿದೆ.
- ಸುಧಾಮೂರ್ತಿ, ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ

ಕೊನೆಗೂ ಮೆಟ್ರೊ ಸಂಚಾರ ಆರಂಭವಾಗಿರುವುದು ಖುಷಿ ತಂದಿದೆ. ಆದರೆ ಆಗಬೇಕಾದ ಕಾರ್ಯ ಬಹಳಷ್ಟಿದೆ. ಸರ್ಕಾರ ಆದಷ್ಟು ಬೇಗ ಮೆಟ್ರೊ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು.
- ನೆ.ಲ.ನರೇಂದ್ರಬಾಬು, ಶಾಸಕ

ಮೆಟ್ರೊ ರೈಲು ಎಲ್ಲ ಮಾರ್ಗಗಳಲ್ಲಿ ಸಂಚರಿಸುವಂತಾದರೆ ಸುಮಾರು 15 ಲಕ್ಷ ಜನ ರಸ್ತೆಯಲ್ಲಿ ಸಂಚರಿಸುವುದು ತಪ್ಪುತ್ತದೆ. ಇಬ್ಬರಿಗೆ ಒಂದು ವಾಹನ ಎಂದು ಅಂದಾಜಿಸಿದರೂ ಸುಮಾರು 7 ಲಕ್ಷ ವಾಹನಗಳ ಬಳಕೆ ಕಡಿಮೆಯಾಗುತ್ತದೆ. ಮೆಟ್ರೊ ಬಳಸುವ ಮೂಲಕ ಜನರು ಸಂಚಾರ ದಟ್ಟಣೆ ಕಡಿಮೆ ಮಾಡಬೇಕು.
- ಪ್ರವೀಣ್ ಸೂದ್, ಪೊಲೀಸ್ ಕಂಪ್ಯೂಟರ್ ವಿಭಾಗದ ಮುಖ್ಯಸ್ಥ

ದೆಹಲಿಯಲ್ಲಿ ಕಂಡಿದ್ದ ಮೆಟ್ರೊ ರೈಲು ನಮ್ಮ ಊರಿಗೆ ಬಂದಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನನ್ನ ಕೃತಜ್ಞತೆಗಳು.
- ಸೈಯದ್ ಯೂಸೂಫ್, ಶಿವಾಜಿನಗರದ ವ್ಯಾಪಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.