ಕಂಪೆನಿಯ ಪ್ರತಿನಿಧಿ ಸ್ವಾತಿ ಕಲ್ಗಾಂವ್ಕರ್ ಮಾತನಾಡಿ, ‘ಬಾದಾಮಿಯಲ್ಲಿನ ಪೌಷ್ಟಿಕ ಅಂಶಗಳು ಆಯುರ್ವೇದ, ಯುನಾನಿ, ಸಿದ್ಧ ಔಷಧ ವಿಜ್ಞಾನದಲ್ಲೂ ಉಲ್ಲೇಖಿತವಾಗಿವೆ. ಪ್ರತಿದಿನ 30 ಗ್ರಾಂ ಬಾದಾಮಿ ಸೇವಿಸುವುದರಿಂದ ದಿನವೆಲ್ಲಾ ಚೈತನ್ಯಶೀಲರಾಗಿ ಇರಬಹುದು’ ಎಂದರು. ಪ್ರಾಧ್ಯಾಪಕಿ ಪದ್ಮಾ ವೆಂಕಟ,‘ ಬಿಡುಗಡೆಯಾದ ಉತ್ಪನ್ನವನ್ನು ಹಲವಾರು ಜನರಿಗೆ ವಿತರಿಸಿ ಸಂಶೋಧನೆ ಮಾಡಲಾಗಿದೆ. ಈ ಉತ್ಪನ್ನವು ಜೀರ್ಣಕ್ರಿಯೆ ಹೆಚ್ಚಿಸಲು, ಚರ್ಮದ ರಕ್ಷಣೆಗೆ, ಕೂದಲು ಉದುರುವುದನ್ನು ತಡೆಯಲು ಹಾಗೂ ಬೊಜ್ಜನ್ನು ಕರಗಿಸಲು ನೆರವಾಗುತ್ತದೆ ಎಂಬ ಅಂಶ ದೃಢಪಟ್ಟಿದೆ’ ಎಂದರು.