ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಾಲ್ಯಜೀವನ ಸ್ವರ್ಗವಿದ್ದಂತೆ’

Last Updated 3 ಮೇ 2019, 20:17 IST
ಅಕ್ಷರ ಗಾತ್ರ

ರಾಜರಾಜೇಶ್ವರಿನಗರ: ‘ಬಾಲ್ಯ ಜೀವನವು ಸ್ವರ್ಗವಿದ್ದಂತೆ. ಮಕ್ಕಳ ಮನಸ್ಸು ಶುಭ್ರ ಮತ್ತು ಸ್ವಚ್ಛವಾಗಿರುತ್ತದೆ’ ಎಂದು ವಚನಜ್ಯೋತಿ ಬಳಗದ ಅಧ್ಯಕ್ಷ ಎಸ್.ಪಿನಾಕಪಾಣಿ ಹೇಳಿದರು.

ಜ್ಞಾನಭಾರತಿ ವಾರ್ಡ್‍ನ ಐಟಿಐ ಬಡಾವಣೆಯ ಹಾರಕೂಡೆ ಕುಠೀರದಲ್ಲಿ ನಡೆದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಮಕ್ಕಳು ಹೆಜ್ಜೆ ಹಾಕಿ ಕುಣಿದರೆ ಅದು ಸಂಭ್ರಮ. ಹಾಡಿದರೆ ಇನ್ನೂ ಚೆಂದ, ಮಾತನಾಡುವುದನ್ನು ಆಲಿಸುವುದೆ ಒಂದು ಸೊಗಸು’ ಎಂದು ಬಣ್ಣಿಸಿದರು.

‘ಈ ಶೈಕ್ಷಣಿಕ ವರ್ಷದಲ್ಲಿ ಕನಿಷ್ಟ 200 ಶಾಲೆಗಳಿಗೆ ಭೇಟಿನೀಡಿ, ವಚನ ತರಗತಿ ನಡೆಸಲಾಗುವುದು’ ಎಂದರು.ಶಿಬಿರದ ನಿರ್ದೇಶಕಿ ಮೀನಾಕ್ಷಿ ಮೇಟಿ, ವಾಸ್ತುಶಿಲ್ಪಿ ಚಂದ್ರಿಕಾ ಗುರುಪ್ರಸಾದ್ ಚಿಣ್ಣರಿಗೆ ಪ್ರಶಂಸಾಪತ್ರ ವಿತರಿಸಿದರು.

ಯುವ ಸಮೂಹ ಆದರ್ಶಗಳನ್ನುಪಾಲಿಸಬೇಕು

ಕೆ.ಆರ್.ಪುರ: ‘ಅಂಬೇಡ್ಕರ್‌ ಮತ್ತು ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನ್ ರಾಮ್‌ ಅವರ ಆದರ್ಶಗಳನ್ನು ಇಂದಿನ ಯುವ ಜನರು ತಪ್ಪದೇ ಪಾಲಿಸಬೇಕು’ ಎಂದು ಸಹ ಪ್ರಾಧ್ಯಾಪಕ ಸಿ.ಜೆ.ಲಕ್ಷ್ಮೀಪತಿ ಹೇಳಿದರು.

ಕೆ.ಆರ್.ಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಈ ಮಹನಿಯರ ಜನ್ಮದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜೀವನದುದ್ದಕ್ಕೂ ಅವಮಾನಗಳನ್ನು ಎದುರಿಸಿದ ಅಂಬೇಡ್ಕರ್‌ ಅವರು ಸಮಾಜದ ಏಳಿಗೆಗಾಗಿ ದುಡಿದರು. ಸಂವಿಧಾನದ ಮೂಲಕ ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಕಲ್ಪಿಸಿದರು. ಅವರ ಚಿಂತನೆ ಪಾಲಿಸಿ, ದೇಶದ ಅಭಿವೃದ್ಧಿಗೆ ನಾವು ಕಂಕಣಬದ್ಧರಾಗಬೇಕು’ ಎಂದರು.

‘ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದರೂ ಜಗಜೀವನ್‌ ರಾಮ್‌ ಪ್ರಚಾರ ಬಯಸಲಿಲ್ಲ. ಅವರು ಇಂದಿನ ರಾಜಕಾರಣಿಗಳಿಗೆ ಮಾದರಿ’ ಎಂದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT