ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾತಿನ ಒಗ್ಗರಣೆ ಕೊಟ್ಟ ಪ್ರಸಂಗ ವಿಧಾನಸಭೆಯಲ್ಲಿ ಶುಕ್ರವಾರ ನಡೆಯಿತು.

ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಕುರಿತು ಮಾತನಾಡಿದ ಯಡಿಯೂರಪ್ಪ ಅವರು ತಾವು ಹೇಗೆ ಅಧಿಕಾರ ಕಳೆದುಕೊಳ್ಳಬೇಕಾಯಿತು ಎನ್ನುವುದನ್ನು ವಿವರಿಸಿದರು. ಜೊತೆಗೆ ಸಿದ್ದರಾಮಯ್ಯ ಅವರಿಗೆ ಮುನ್ನೆಚ್ಚರಿಕೆಯನ್ನೂ ನೀಡಿದರು. `ಒಂದು ವರ್ಷದ ನಂತರ ನಿಮ್ಮನ್ನು (ಸಿದ್ದರಾಮಯ್ಯ) ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಲು ಬಿಡುವುದಿಲ್ಲ. ಹೆಚ್ಚೆಂದರೆ ಲೋಕಸಭಾ ಚುನಾವಣೆವರೆಗೂ ಸುಮ್ಮನಿರಬಹುದು ಅಷ್ಟೇ' ಎಂದು ಮಾರ್ಮಿಕವಾಗಿ ಹೇಳಿದರು.

`ಒಗ್ಗರಣೆ ಹಾಕಿದ ನಂತರ ಕರಿಬೇವು ಎಲೆಯನ್ನು ಬಿಸಾಕುವಂತೆ, ಲೋಕಸಭಾ ಚುನಾವಣೆ ನಂತರ ನಿಮ್ಮನ್ನೂ ಬಿಸಾಕುವ ಆತಂಕವಿದೆ. ತರಾತುರಿಯಲ್ಲಿ ಹೊಸ ಯೋಜನೆಗಳನ್ನು ಘೋಷಣೆ ಮಾಡುವುದನ್ನು ಗಮನಿಸಿದರೆ, ಇದು ನಿಮಗೂ ಗೊತ್ತು ಅನಿಸುತ್ತದೆ' ಎಂದು ಶಂಕೆ ವ್ಯಕ್ತಪಡಿಸಿದರು.

ಆಗ ಎದ್ದುನಿಂತ ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ, `ಪ್ರಣಾಳಿಕೆಯೇ ನಮಗೆ ಬೈಬಲ್, ಕುರಾನ್, ಭಗವದ್ಗೀತೆ ಇದ್ದಂತೆ. ಪ್ರಣಾಳಿಕೆಯಲ್ಲಿ ಹೇಳಿರುವುದನ್ನು ಜಾರಿ ಮಾಡುವುದು ನಮ್ಮ ಕರ್ತವ್ಯ. ಐದು ವರ್ಷದ ಅವಧಿ ಪೂರ್ಣಗೊಂಡ ನಂತರ ಮತ್ತೆ ಬರುತ್ತೇವೆ. ಆ ಬಗ್ಗೆ ಯಾವುದೇ ಶಂಕೆ ಬೇಡ' ಎಂದರು.

`ನಮ್ಮ ಆತಂಕ ಸುಳ್ಳಾಗಲಿ. ಐದು ವರ್ಷ ನೀವು ಅಧಿಕಾರದಲ್ಲಿ ಇರಲಿ ಎಂಬ ಅಪೇಕ್ಷೆ ನಮಗೂ ಇದೆ. ಆದರೆ, ವಸ್ತುಸ್ಥಿತಿ ಆ ರೀತಿ ಇಲ್ಲವಲ್ಲ. ಒಬ್ಬ ಶಾಸಕರು ಇನ್ನೂ ಪ್ರಮಾಣ ವಚನ ಸ್ವೀಕರಿಸಿಲ್ಲ. ರಮೇಶ್ಕುಮಾರ್ ಸಂಪುಟ ಸೇರಿಲ್ಲ. ಮೆಧಾವಿಯಾದ ಟಿ.ಬಿ.ಜಯಚಂದ್ರ ಅವರಿಗೆ ಪ್ರಮುಖ ಖಾತೆ ಸಿಕ್ಕಿಲ್ಲ. ಮುಂದೆ ಏನಾಗಬಹುದು ಎಂಬ ವಾಸ್ತವ ಸ್ಥಿತಿ ಸಿದ್ದರಾಮಯ್ಯ ಅವರಿಗೂ ಗೊತ್ತಿದೆ' ಎಂದು ಯಡಿಯೂರಪ್ಪ ಕಿಚಾಯಿಸಿದರು.

`ನೀವು (ಯಡಿಯೂರಪ್ಪ) ಮುಖ್ಯಮಂತ್ರಿ ಆದಾಗ ಬಹಳ ಗಟ್ಟಿಯಾಗಿಯೇ ಇ್ದ್ದದಿರಿ. ಅಕ್ಕಪಕ್ಕದವರು ಭಯ ಹುಟ್ಟಿಸಿ ಆಪರೇಷನ್ ಕಮಲಕ್ಕೆ ಕೈಹಾಕುವಂತೆ ಮಾಡಿದರು. ಈಗ ಸಿದ್ದರಾಮಯ್ಯ ಗಟ್ಟಿಯಾಗಿಯೇ ಇದ್ದಾರೆ. ಏನೇನೋ ಹೇಳಿ ಅವರಲ್ಲಿ ಭಯ ಹುಟ್ಟಿಸಬೇಡಿ' ಎಂಬ ಮನವಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಎಚ್. ಕೆ.ಪಾಟೀಲ ಅವರಿಂದ ಬಂತು.

ಆದರೂ ಯಡಿಯೂರಪ್ಪ ತಮ್ಮ ಮಾತಿನ ಧಾಟಿ ಬದಲಾಯಿಸಲಿಲ್ಲ. `ಗಾಜಿನ ಮನೆಯಲ್ಲಿ ಕುಳಿತು ಹಿಂದೆ ಆಡಳಿತ ನಡೆಸಿದವರ ಮೇಲೆ ಕಲ್ಲು ಎಸೆಯುವ ಕೆಲಸ ಮಾಡಬೇಡಿ. ನಿಮ್ಮ ಪಕ್ಷದಲ್ಲಿ ಬೂದಿ ಮುಚ್ಚಿದ ಕೆಂಡದ ವಾತಾವರಣ ಇದೆ. ಯಾವಾಗ ಬೇಕಾದರೂ ಸ್ಫೋಟ ಆಗಬಹುದು. ನಿಮ್ಮ ಪಕ್ಷದಲ್ಲಿರುವ ಎಲ್ಲರನ್ನೂ ಸಮಾಧಾನದಿಂದ ನಡೆಸಿಕೊಂಡು ಅಪರೂಪದ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ' ಎಂದು ಸಿದ್ದರಾಮಯ್ಯಗೆ ಸಲಹೆ ಮಾಡಿದರು.

ರೇವಣ್ಣ ಜೇಬಿನಲ್ಲಿ ನಿಂಬೆ
ನಿಂಬೆಹಣ್ಣಿನ ಬೆಲೆ ಹೆಚ್ಚಾಗಲು ಕಾರಣ ಏನು? ಈ ಪ್ರಶ್ನೆ ವಿಧಾನಸಭೆಯಲ್ಲಿ ಶುಕ್ರವಾರ ಸ್ವಾರಸ್ಯಕರ ಚರ್ಚೆಗೆ ಗ್ರಾಸ ನೀಡಿತು.
ತೆಂಗು ಮತ್ತು ಅದರ ಉತ್ಪನ್ನಗಳ ಬೆಲೆ ಕುಸಿತದಿಂದ ಬೆಳೆಗಾರರು ಸಂಕಷ್ಟ ಎದುರಿಸುತ್ತಿದ್ದಾರೆ ಎಂಬುದನ್ನು ಜೆಡಿಎಸ್ನ ಕೆ.ಎಂ.ಶಿವಲಿಂಗೇಗೌಡ ಅವರು ನಿಯಮ 69ರಡಿ ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ತಾವು ಇತ್ತೀಚೆಗೆ ಮದುವೆ ಸಮಾರಂಭವೊಂದಕ್ಕೆ ಹೋಗಿದ್ದಾಗ ತಾಂಬೂಲ ಇದ್ದ ಕೈಚೀಲ ಕೊಟ್ಟಿದ್ದನ್ನು ಪ್ರಸ್ತಾಪಿಸಿದರು. `10 ರೂಪಾಯಿ ಬೆಲೆಯ ಕೈಚೀಲದಲ್ಲಿ 3.50 ರೂಪಾಯಿಯ ತೆಂಗಿನ ಕಾಯಿ ಇತ್ತು. ಇವತ್ತು ತೆಂಗಿನ ಕಾಯಿಗೆ ಕೈಚೀಲದಷ್ಟೂ ಬೆಲೆ ಇಲ್ಲ' ಎಂದು ಬೇಸರ ವ್ಯಕ್ತಪಡಿಸಿದರು.

`ಅದು ಹಾಗಿರಲಿ, ನಿಂಬೆ ಹಣ್ಣಿಗಿರುವ ಬೆಲೆಯೂ ತೆಂಗಿಗೆ ಸಿಗುತ್ತಿಲ್ಲ. ಮಾರುಕಟ್ಟೆಯಲ್ಲಿ ಒಂದು ನಿಂಬೆ ಹಣ್ಣಿಗೆ 10 ರೂಪಾಯಿ ಬೆಲೆ ಇದೆ' ಎಂದು ಶಿವಲಿಂಗೇಗೌಡ ಹೇಳುತ್ತಿದ್ದಂತೆ ಜೆಡಿಎಸ್ನ ಎಚ್.ಡಿ. ರೇವಣ್ಣ ಎದ್ದುನಿಂತು `ನಿಂಬೆ ಹಣ್ಣು ಯಾವ್ಯಾವ ಕಾರ್ಯಕ್ಕೆ ಬಳಕೆ ಆಗುತ್ತದೆ ಎಂಬುದು ಶಿವಲಿಂಗೇಗೌಡರಿಗೆ ಚೆನ್ನಾಗಿ ಗೊತ್ತಿದೆ' ಎಂದು ಹುಳಿಹಿಂಡಿದರು.

ಆಗ ಕಾನೂನು ಸಚಿವ ಟಿ.ಬಿ.ಜಯಚಂದ್ರ `ನಿಂಬೆ ಹಣ್ಣಿಗೆ ಹೆಚ್ಚಿನ ಬೆಲೆ ಬಂದಿದ್ದರೆ ಅದಕ್ಕೆ ರೇವಣ್ಣ ಕಾರಣ. ಅವರು ಸದಾ ತಮ್ಮ ಜೇಬಿನಲ್ಲಿ ಒಂದು ನಿಂಬೆ ಹಣ್ಣು ಇಟ್ಟುಕೊಂಡಿರುತ್ತಾರೆ' ಎಂದು ಕಾಲೆಳೆದರು.

ಥಟ್ಟನೆ ಎದ್ದುನಿಂತ ರೇವಣ್ಣ `ಹಾಗಾದರೆ ಒಂದು ಕೆಲ್ಸ ಮಾಡಿ. ಎಲ್ಲ ಸಚಿವರು ಮತ್ತು ಶಾಸಕರು ಕಡ್ಡಾಯವಾಗಿ ತಮ್ಮ ಜೇಬಿನಲ್ಲಿ ನಿಂಬೆ ಹಣ್ಣು ಇಟ್ಟುಕೊಳ್ಳಬೇಕು ಎಂದು ಸರ್ಕಾರಿ ಆದೇಶ ಹೊರಡಿಸಿ. ಆಗ ಇನ್ನೂ ಹೆಚ್ಚಿನ ಬೆಲೆ ಸಿಗುತ್ತದೆ' ಎಂದಾಗ ಸಭೆ ನಗೆಗಡಲಲ್ಲಿ ತೇಲಿತು.

`ನಿಂಬೆ ಹಣ್ಣಿನ ಬೆಲೆ ಏರಿಕೆಗೆ ವಾಮಾಚಾರ ಜಾಸ್ತಿ ಆಗಿರುವುದೇ ಕಾರಣ' ಎಂದು ಸರ್ವೋದಯ ಕರ್ನಾಟಕ ಪಕ್ಷದ ಕೆ.ಎಸ್.ಪುಟ್ಟಣ್ಣಯ್ಯ ಹೇಳುವುದರ ಮೂಲಕ ಈ ಕುರಿತ ಚರ್ಚೆಗೆ ಅಂತ್ಯ ಹಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.