ಬೆಂಗಳೂರು: ಸರ್ಕಾರದ ಎಲ್ಲ ಇಲಾಖೆಗಳಲ್ಲಿನ ದ್ವಿತೀಯ ದರ್ಜೆ ಸಹಾಯಕ (ಎಸ್ಡಿಎ) ಮತ್ತು ಸಮಾನಾಂತರ ಹುದ್ದೆಗಳಿಗೆ ಪದವಿ ಶಿಕ್ಷಣವನ್ನು ಅರ್ಹತೆಯನ್ನಾಗಿ ಪರಿಗಣಿಸಬೇಕೆಂಬ ಅಧಿಕಾರಿಗಳ ವೇತನ ಸಮಿತಿಯ ಶಿಫಾರಸಿಗೆ ರಾಜ್ಯ ಸರ್ಕಾರಿ ನೌಕರರ ಸಂಘ ಅಸಮಾಧಾನ ವ್ಯಕ್ತಪಡಿಸಿದೆ.

ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ಪದವೀಧರರು ಇರುವುದರಿಂದ ಎಸ್ಡಿಎ ಮತ್ತು ಸಮಾನಾಂತರ ಹುದ್ದೆಗಳಿಗೆ ಪದವಿ ಶಿಕ್ಷಣ ಪೂರೈಸಿರುವುದನ್ನು ಪ್ರಾಥಮಿಕ ಅರ್ಹತೆಯಾಗಿ ಪರಿಗಣಿಸಬೇಕೆಂಬ ಶಿಫಾರಸು ವರದಿುಲ್ಲಿದೆ. ಪ್ರಸ್ತುತ ಎಸ್ಸೆಸ್ಸೆಲ್ಸಿ ಸಾಮಾನ್ಯ ಅರ್ಹತೆಯಾಗಿದೆ. `ಡಿ~ ದರ್ಜೆ ನೌಕರರಿಗೆ ಎಸ್ಸೆಸ್ಸೆಲ್ಸಿ ಪೂರೈಸಿರುವುದನ್ನು ಪ್ರಾಥಮಿಕ ಅರ್ಹತೆಯನ್ನಾಗಿ ನಿಗದಿ ಮಾಡಬೇಕೆಂಬ ಶಿಫಾರಸು ಇದೆ. ಹಾಲಿ ಏಳನೇ ತರಗತಿ ಪೂರೈಸಿರಬೇಕೆಂಬ ನಿಯಮವಿದೆ.

ಈ ಶಿಫಾರಸುಗಳಿಗೆ ಅಸಮಾಧಾನ ವ್ಯಕ್ತಪಡಿಸಿದ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಲ್.ಬೈರಪ್ಪ, `ಸಮಿತಿಯ ಶಿಫಾರಸು ಅನುಷ್ಠಾನ ಯೋಗ್ಯವಾದುದಲ್ಲ. ಎಸ್ಡಿಎ ಹುದ್ದೆಗೆ ಪದವಿ ಕಡ್ಡಾಯಗೊಳಿಸಿದರೆ ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಸ್ನಾತಕೋತ್ತರ ಪದವಿಯನ್ನು ಅರ್ಹತೆಯನ್ನಾಗಿ ಪರಿಗಣಿಸಬೇಕಾಗುತ್ತದೆ.

ಪ್ರಸ್ತುತಗ್ರಾಮೀಣ ಪ್ರದೇಶದ ಮಕ್ಕಳು ಎಸ್ಸೆಸ್ಸೆಲ್ಸಿ, ಪಿಯುಸಿ ಮುಗಿಸುವುದಕ್ಕೂ ಕಷ್ಟಪಡುತ್ತಿದ್ದಾರೆ. ನಾವು ಈ ಶಿಫಾರಸನ್ನು ಒಪ್ಪಿಕೊಳ್ಳುವುದಿಲ್ಲ. ಈ ಸಂಬಂಧ ಸಿಎಂ ಬೇಟಿ ಮಾಡಿ ಚರ್ಚಿಸಲು ಸಮಯ ಕೇಳಿದ್ದೇವೆ~ ಎಂದರು.
ಕೆಲಸದ ಅವಧಿ ಬದಲಾವಣೆ ಮಾಡಬೇಕೆಂಬ ಶಿಫಾರಸು ಕುರಿತು, `ಕೇಂದ್ರ ಸರ್ಕಾರಿ ನೌಕರರ ಮಾದರಿಯಲ್ಲೇ ರಜೆ ಸೌಲಭ್ಯ ನೀಡುವುದಾದರೆ ಕೆಲಸ ವೇಳೆ ಬದಲಾವಣೆಗೆ ಯಾವುದೇ ಅಭ್ಯಂತರವಿಲ್ಲ~ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.