ಭಾರತೀಯ ಸೇನೆಯ ಹೆಲಿಕಾಪ್ಟರ್ಗಳು, ‘ಸೂರ್ಯಕಿರಣ’, ‘ಸಾರಂಗ್’ ಹಾಗೂ ಫ್ಲೈಯಿಂಗ್ ಬುಲ್ಸ್ ತಂಡಗಳು ನಡೆಸಿದ ಕಸರತ್ತುಗಳು ಜನರನ್ನು ಮೂಕವಿಸ್ಮಿತಗೊಳಿಸಿದವು. ಒಂದು ಅಂದಾಜಿನ ಪ್ರಕಾರ ಶನಿವಾರ 50,000ಕ್ಕೂ ಹೆಚ್ಚು ಜನರು ವಿಮಾನಗಳ ಕಸರತ್ತು ನೋಡಿದರು. ಭಾನುವಾರ ರಜಾದಿನ ಆಗಿರುವುದರಿಂದ ಇದಕ್ಕಿಂತಲೂ ಹೆಚ್ಚು ಜನರು ಆಗಮಿಸುವ ನಿರೀಕ್ಷೆ ಇದೆ.