ಕನಕಪುರ: ವೈಯಕ್ತಿಕ ದ್ವೇಷದ ಕಾರಣಕ್ಕೆ ಗುಡಿಸಲಿಗೆ ಬೆಂಕಿ ಹಚ್ಚಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅಳ್ಳಿಮಾರನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಈ ಗುಡಿಸಲು ಕೂಲಿ ಕಾರ್ಮಿಕ ಮರಿಯಪ್ಪ ಅವರಿಗೆ ಸೇರಿದ್ದಾಗಿದೆ.

ಇದೇ ಗ್ರಾಮದ ವೆಂಕಟೇಗೌಡ ಅವರ ಮಗ ಶ್ರೀನಿವಾಸ್ ಗುಡಿಸಲಿಗೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ.

ಮರಿಯಪ್ಪ ಅವರ ಗುಡಿಸಲಿನ ಹಿಂದಿನ ಸರ್ಕಾರಿ ಗೋಮಾಳವನ್ನು ಒತ್ತುವರಿ ಮಾಡಿಕೊಂಡು ವೆಂಕಟೇಗೌಡ ಕೃಷಿ ಮಾಡುತ್ತಿದ್ದಾರೆ.

‘ರಸ್ತೆಯ ಸಮೀಪವಿರುವ ಮರಿಯಪ್ಪನ ಗುಡಿಸಲನ್ನು ತೆರವುಗೊಳಿಸದರೆ ಆ ಜಾಗವನ್ನು ಒತ್ತುವರಿ ಮಾಡಿಕೊಳ್ಳಬಹುದೆಂಬ ದುರುದ್ದೇಶದಿಂದ ಶ್ರೀನಿವಾಸ ಗುಡಿಸಲಿಗೆ ಬೆಂಕಿ ಹಚ್ಚಿದ್ದಾನೆ’ ಎಂದು ಮರಿಯಪ್ಪನ ಪತ್ನಿ ದೇವಮ್ಮ ದೂರಿದ್ದಾರೆ.

ಗುಡಿಸಲಿನ ಒಳಗಿದ್ದ ಒಡವೆ ಮತ್ತು ಸಾಮಾನುಗಳು ಸುಟ್ಟು ಹೋಗಿದ್ದು, ಸುಮಾರು ೩೦ ಸಾವಿರ ನಷ್ಟವಾಗಿದೆ ಎನ್ನಲಾಗಿದೆ. ಶ್ರೀನಿವಾಸ್ ವಿರುದ್ಧ ದೂರು ದಾಖಲಾಗಿದೆ. ಪಿ.ಎಸ್ಸೈ ಹೇಮಂತ್ಕುಮಾರ್ ಅವರು ಘಟನಾಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.