ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಿಕ್ಷಣ ನೀತಿ ಬಗ್ಗೆ ತಿಳಿವಳಿಕೆ ಇಲ್ಲದೆ ವಿರೋಧಿಸಬೇಡಿ’

ಕರಡು ಸಮಿತಿ ಸದಸ್ಯ ಪ್ರೊ.ಎಂ.ಕೆ. ಶ್ರೀಧರ್ ಮನವಿ
Last Updated 15 ಜೂನ್ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ತಿಳಿವಳಿಕೆ ಇಲ್ಲದೆ ವಿರೋಧಿಸಬೇಡಿ, ಮೊದಲು ಓದಿ ತಿಳಿದುಕೊಳ್ಳುವ ಪ್ರಯತ್ನ ಮಾಡಿ’ ಎಂದು ನೀತಿಯ ಕರಡು ಸಮಿತಿ ಸದಸ್ಯ ಪ್ರೊ. ಎಂ.ಕೆ. ಶ್ರೀಧರ್ ಮನವಿ ಮಾಡಿದರು.

ಕರ್ನಾಟಕ ಚಿಂತಕರ ಚಾವಡಿ ನಗರದಲ್ಲಿ ಶನಿವಾರ ಏರ್ಪಡಿಸಿದ್ದ'ಸಂಸ ಧ್ವನಿ'ಕಾರ್ಯಕ್ರಮದಲ್ಲಿ ರಾಷ್ಟೀಯ ಶಿಕ್ಷಣನೀತಿ ಕರಡು–2019’ ಕುರಿತ ಚರ್ಚೆಯಲ್ಲಿ ಅವರು ಮಾತನಾಡಿದರು.

‘175 ವರ್ಷಗಳ ಹಿಂದೆ ಬ್ರಿಟಿಷರು ರೂಪಿಸಿದ ಶಿಕ್ಷಣ ಪದ್ಧತಿಗಳನ್ನೇ ಈಗಲೂ ಪಾಲಿಸಲಾಗುತ್ತಿದೆ. ಗುಮಾಸ್ತ ಹುದ್ದೆ ನೇಮಕಾತಿ ಸಂದರ್ಭದಲ್ಲಿ ಅವರು ಎಸ್ಎಸ್‌ಎಲ್‌ಸಿ ಪರೀಕ್ಷಾ ಪದ್ಧತಿ ಜಾರಿಗೆ ತಂದರು. ಅದನ್ನೇ ಇಂದಿಗೂ ಪಾಲಿಸುತ್ತಿದ್ದೇವೆ’ ಎಂದರು.

‘ವಾಸ್ತವದ ನೆಲೆಗಟ್ಟಿನಲ್ಲಿ ಕರಡು ರಚನೆ ಮಾಡಲಾಗಿದೆ. ಈ ಕರಡು ನೀತಿಯನ್ನು ಒಪ್ಪಿಕೊಳ್ಳಿ ಎಂದು ನಾನು ಹೇಳುವುದಿಲ್ಲ. ಮೊದಲು ಅದನ್ನುಸ್ವೀಕರಿಸಿ ತಿಳಿದುಕೊಳ್ಳುವ ಪ್ರಯತ್ನ ಮಾಡಿ. ಯಾವುದೋ ಒಂದು ಸಾಲನ್ನು ಹಿಡಿದು ಇಡೀ ನೀತಿಯನ್ನೇ ಜರಿಯಬೇಡಿ’ ಎಂದರು.‘ಭಾರತೀಯರ ಆತ್ಮ ಬಲ ಕುಗ್ಗಿಸುವ ಶಿಕ್ಷಣ ವ್ಯವಸ್ಥೆಯನ್ನು ಬ್ರಿಟಿಷರು ಜಾರಿಗೆ ತಂದಿದ್ದರು. ವಸಾಹತುಶಾಹಿ ಸಂಸ್ಕೃತಿ ಮತ್ತು ಪರಂಪರೆಯನ್ನು ನಾಶಪಡಿಸುವ ಪ್ರಯತ್ನವನ್ನು ನಾವು ಹೊಸ ಶಿಕ್ಷಣ ನೀತಿಯಲ್ಲಿ ಮಾಡಿದ್ದೇವೆ.ಇದರಲ್ಲಿ ಖಂಡಿತವಾಗಿ ನಾವುವಸಾಹತು ಅಥವಾ ಭಾರತೀಯ ಎಂಬ ಪದವನ್ನು ಬಳಸಲಿಲ್ಲ. ಆ ಪದ ಬಳಸುವುದು ಮುಖ್ಯವಲ್ಲ, ಸಾರ ಮತ್ತು ಆತ್ಮ ಮುಖ್ಯ’ ಎಂದರು.

ಉದ್ಯಮಿ‌ಟಿ.ವಿ. ಮೋಹನದಾಸ ಪೈ ಮಾತನಾಡಿ, ‘21ನೇ ಶತಮಾನದ ಯುವ ಪೀಳಿಗೆಯನ್ನು ಸಮಗ್ರವಾಗಿ ಕಟ್ಟುವ ದೃಷ್ಟಿಕೋನ ಇಟ್ಟುಕೊಂಡು ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಸಿದ್ಧವಾಗಿದೆ. ಸುಳ್ಳು ಮಾಹಿತಿಯೊಂದಿಗೆ ಎದ್ದಿರುವ ಗೊಂದಲಗಳಿಗೆ ಕಿವಿಗೊಡಬೇಡಿ’ ಎಂದು ವಿನಂತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT