ಬೆಂಗಳೂರು: ‘ಅಡ್ಡ ಪರಿಣಾಮಗಳಿಲ್ಲದೆ ಕ್ಯಾನ್ಸರ್ ರೋಗಿಗಳಿಗೆ ಕಿಮೊಥೆರಪಿ ನೀಡುವ ವಿಧಾನವನ್ನು ಭೌತ ವಿಜ್ಞಾನದ ತಂತ್ರಗಳನ್ನು ಬಳಸಿ ಅಭಿವೃದ್ಧಿಪಡಿಸಬಹುದು’ ಎಂದು ಪಿಟ್ಸ್ಬರ್ಗ್ನ ಕಾರ್ನಿಗೀ ಮೆಲನ್ ವಿಶ್ವವಿದ್ಯಾಲಯದ ಅಧ್ಯಕ್ಷ ಸುಬ್ರಾ ಸುರೇಶ್ ಅವರು ಹೇಳಿದರು.

ಭಾರತೀಯ ವಿಜ್ಞಾನ ಸಂಸ್ಥೆಯು ಬುಧವಾರ ಏರ್ಪಡಿಸಿದ್ದ ಸುವರ್ಣ ಮಹೋತ್ಸವ ಉಪನ್ಯಾಸ ಮಾಲೆಯಲ್ಲಿ ‘ಎಂಜಿನಿಯರಿಂಗ್, ವಿಜ್ಞಾನ ಮತ್ತು ವೈದ್ಯಕೀಯ ತಂತ್ರಗಾರಿಕೆಗಳಿಂದ ರೋಗಗಳ ಅಧ್ಯಯನ’ ವಿಷಯ ಕುರಿತು ಅವರು ಮಾತನಾಡಿದರು.

‘ಕ್ಯಾನ್ಸರ್ ಗುಣಪಡಿಸಲು ಕಿಮೊಥೆರಪಿ ನೀಡುವಾಗ ಆರೋಗ್ಯವಂತ ಜೀವಕೋಶಗಳೂ ಸಾವನ್ನಪ್ಪುತ್ತವೆ. ಕೆಂಪು ರಕ್ತ ಕಣಗಳು ಗಡುಸಾಗುವುದು, ರಕ್ತನಾಳಗಳು ಕುಗ್ಗುವುದು ಮೊದಲಾದ ಅಡ್ಡ ಪರಿಣಾಮಗಳಿಗೆ ರೋಗಿ ತುತ್ತಾಗುತ್ತಾನೆ. ಅಡ್ಡ ಪರಿಣಾಮಗಳಿಲ್ಲದ ಚಿಕಿತ್ಸಾ ವಿಧಾನವನ್ನು ರೂಪಿಸುವ ನಿಟ್ಟಿನಲ್ಲಿ ಅನ್ವಯಿಕ ವಿಜ್ಞಾನದಲ್ಲಿ ಸಂಶೋಧನೆಗಳು ನಡೆಯುತ್ತಿವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.