ಶನಿವಾರ, ಅಕ್ಟೋಬರ್ 16, 2021
29 °C

6 ಗ್ರಾಂ ಚಿನ್ನ, 20 ಸಾವಿರ ನಗದು ಕಳವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಮನಾಬಾದ್: ತಾಲ್ಲೂಕಿನ ಹುಡಗಿ ಗ್ರಾಮದಲ್ಲಿ ಗುರುವಾರ ರಾತ್ರಿ ಎರಡು ಕಡೆಗಳಲ್ಲಿ ಕಳ್ಳತನ ನಡೆದಿವೆ. ಹುಡಗಿ ಗ್ರಾಮದ ಬಸವತೀರ್ಥ ಬಡಾವಣೆಯ ನಿವಾಸಿ ಬಸವರಾಜ ಕಂಟೆಪ್ಪಗೋಳ್ ಅವರ ಮನೆಯಲ್ಲಿದ್ದ ಅಲಮಾರಿ ಬೀಗ ಒಡೆದು ಕಳ್ಳರು 6 ಗ್ರಾಂ ಚಿನ್ನ 8 ಸಾವಿರ ನಗದು ಕಳ್ಳತನ ಮಾಡಿದ್ದಾರೆ.

ಅದೇ ರಾತ್ರಿ ಬಸವತೀರ್ಥ ಬಡಾವಣೆಯ ಎದುರು ಮನೆಯ ಶಿವಕುಮರ್ ವಾಡೇಕರ್ ಅವರ ಮನೆಯಲ್ಲಿದ್ದ ₹12 ಸಾವಿರ ನಗದು ಹಣ ಕದ್ದೊಯ್ದಿದ್ದಾರೆ. ಈ ಕುರಿತು ಹುಮನಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆತಂಕ: ಒಂದೇ ದಿನ ಎರಡು ಮನೆಗಳಲ್ಲಿ ಕಳ್ಳತನ ಆಗಿದ್ದರಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಪೊಲೀಸರು ರಾತ್ರಿ ಗಸ್ತು ಬಲಪಡಿಸಬೇಕು ಎಂದು ಗ್ರಾಮಸ್ಥರಾದ ಶಶಿಕುಮಾರ್ ಮಾಶೆಟ್ಟಿ, ಬಸವರಾಜ, ಶಿವಕುಮಾರ್ ಆಗ್ರಹಿಸುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.