ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್ | ವಿವಿಧೆಡೆ ವಿಜೃಂಭಣೆಯ ಹನುಮ ಜಯಂತಿ ಆಚರಣೆ

Last Updated 6 ಏಪ್ರಿಲ್ 2023, 15:49 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲೆಯ ವಿವಿಧೆಡೆ ಗುರುವಾರ ಹನುಮ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಲಾಯಿತು. ಹನುಮ ದೇಗುಲಗಳಲ್ಲಿ ವಿಶೇಷ ಅಭಿಷೇಕ ಹಾಗೂ ಪೂಜೆ ನಡೆಯಿತು.

ಭಕ್ತರು ಬೆಳಿಗ್ಗೆ ಸರತಿ ಸಾಲುಗಳಲ್ಲಿ ನಿಂತು ಆಂಜನೇಯನ ದರ್ಶನ ಪಡೆದು ತೆಂಗಿನ ಒಡೆದು ಕರ್ಪೂರ್‌ ಬೆಳಗಿ ಭಕ್ತಿಭಾವ ಮೆರೆದರು. ಅನೇಕ ಮಂದಿರಗಳಲ್ಲಿ ಹನುಮಾನ ಚಾಲಿಸಾ ಪಠಿಸಲಾಯಿತು. ಎಲ್ಲ ಮಂದಿರಗಳಲ್ಲಿ ವೀರಾಂಜನೇಯನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಕೆಲ ಮಂದಿರಗಳಲ್ಲಿ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಯಿತು.

ಜನವಾಡ ರಸ್ತೆಯಲ್ಲಿರುವ ಶಹಾಗಂಜ್‌ ಹನುಮಾನ ಮಂದಿರ, ಕೆಇಬಿ ರಸ್ತೆಯಲ್ಲಿರುವ ಹನುಮಾನ ಮಂದಿರ ಹಾಗೂ ಗುಂಪಾದ ಆಂಜನೇಯ ಮಂದಿರಗಳಲ್ಲಿ ಭಕ್ತರ ಜನದಟ್ಟಣೆ ಇತ್ತು.

ಸಂಜೆ ನಗರದಲ್ಲಿ ಹನುಮದೇವರ ಭಾವಚಿತ್ರ ಭವ್ಯ ಮೆರವಣಿಗೆ ನಡೆಯಿತು. ಕೇಸರಿ ಶಲ್ಯ ಹಾಗೂ ಟೊಪ್ಪಿಗೆ ಧರಿಸಿದ್ದ ನೂರಾರು ಯುವಕರು ಜಯ ಘೋಷ ಮೊಳಗಿಸುತ್ತ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಅಖಂಡ ಹನುಮಾನ್‌ ಚಾಲಿಸಾ ಪಠಣ: ಬೀದರ್‌ ಅಂಚಲ ವತಿಯಿಂದ ಹನುಮಾನ್ ಜನಮೋತ್ಸವ ಪ್ರಯುಕ್ತ ನಗರದ ಜನವಾಡ ಮಾರ್ಗದಲ್ಲಿರುವ ಹನುಮಾನ ಮಂದಿರದ ಆವರಣದಲ್ಲಿ ಅಖಂಡ ಹನುಮಾನ ಚಾಲಿಸಾ ಪಠಣ ಕಾರ್ಯಕ್ರಮ ನಡೆಯಿತು.

ಏಕಲ ಅಭಿಯಾನದ ಔರಾದ್, ಕಮಠಾಣ, ಮನ್ನಾಎಖ್ಖೆಳ್ಳಿ, ದಾಡಗಿ, ಭಾತಾಂಭ್ರ ಹಾಗೂ ಬಸವಕಲ್ಯಾಣದ ಕಾರ್ಯಕರ್ತರು ಮತ್ತು ಆಚಾರ್ಯರು ಬೆಳಿಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ನಿರಂತರವಾಗಿ ಹನುಮಾನ ಚಾಲಿಸಾ ಜಪ ಮಾಡಿದರು.

ಬೀದರ್‌ ಅಂಚಲ ಉತ್ತರ ಭಾಗದ ಅಧ್ಯಕ್ಷ ರಾಜಕುಮಾರ ಅಗ್ರವಾಲ ಕಾರ್ಯಕ್ರಮಕ್ಕೆ ಮೂಲಕ ಚಾಲನೆ ನೀಡಿದರು.

ಅಂಚಲ ಅಧ್ಯಕ್ಷ ರಾಜಕುಮಾರ ಅಳ್ಳೆ ಅಧ್ಯಕ್ಷತೆ ವಹಿಸಿದ್ದರು. ರಘುಕೃಷ್ಣ ಮೂರ್ತಿ, ಸಮಿತಿಯ ವಿಶ್ವನಾಥ ಶಿಕಾರಿ, ಶಿವ ಶರಣ್ಣಪ್ಪ ಚಿಟ್ಟಾ, ಅಂಚಲ ಕಾರ್ಯದರ್ಶಿ ಸಚ್ಚಿದಾನಂದ ಚಿದ್ರೆ, ಖಚಾಂಚಿ ದತ್ತಾತ್ರೇಯ ಸಗ್ಗಮ, ಕಾಮಶೆಟ್ಟಿ ಚಿಕ್ಕಬಸೆ, ಗಣೇಶ ಕಪಲಾಪೊರ, ಜಗನ್ನಾಥ ಭಂಗೋರೆ, ಹಂಸರಾಜ್ ಪಟೇಲ್ ಹಾಗೂ ಅರುಣಾ ಅಳ್ಳೆ, ನೇತ್ರಾ, ರೀಟಾ ಗುಜರಾತಿ, ಚಂದ್ರಕಾಂತ ಸ್ವಾಮಿ, ಚಿದಾನಂದ ಸಿಂಧೆ, ಅಂಚಲ ಪ್ರಶಿಕ್ಷಣ ಪ್ರಮುಖರಾದ ಲಕ್ಷ್ಮಿ ಹಾಗೂ ಸುಭಾಷ ಇಟಗೆ, ಬಾಲಾಜಿ ಜಬಾಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT