ಸೋಮವಾರ, ಜೂನ್ 14, 2021
20 °C
ಘಟನಾ ಸ್ಥಳಕ್ಕೆ ಎಎಸ್ಪಿ ಗೋಪಾಲ ಬ್ಯಾಕೋಡ್, ಡಿವೈಎಸ್ಪಿ ಡಾ.ದೇವರಾಜ ಭೇಟಿ

ಭಾಲ್ಕಿ: ಕಲ್ಲಿನಿಂದ ಜಜ್ಜಿ ನಡು ರಸ್ತೆಯಲ್ಲಿ ವ್ಯಕ್ತಿ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಾಲ್ಕಿ: ತಾಲ್ಲೂಕಿನ ತಳವಾಡ(ಕೆ)-ಲೆಕ್ಚರ್ ಕಾಲೊನಿಯ ರಸ್ತೆಯಲ್ಲಿ ಬುಧವಾರ ತಡರಾತ್ರಿ ಕದಲಾಬಾದ್ ಗ್ರಾಮದ ನಿವಾಸಿ ರಾಜಕುಮಾರ ಸಿದ್ರಾಮಪ್ಪ ಬಿರಾದಾರ (45) ಅವರನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಘಟನೆ ನಡೆದಿದೆ.

‘ಬುಧವಾರ ಹೊಲದಲ್ಲಿ ಪತ್ನಿ, ಮಗನೊಂದಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ರಾಜಕುಮಾರ ಅವರು
ಸಂಜೆ ಆಗುತ್ತಲೇ ನನ್ನನ್ನು ಮತ್ತು ಮಗನನ್ನು ಮನೆಗೆ ಕಳುಹಿಸಿ ನಂತರ ಬರುವುದಾಗಿ ಹೇಳಿದ್ದಾನೆ. ಅನುಮಾನಾಸ್ಪದವಾಗಿ ನಡು ರಸ್ತೆಯಲ್ಲಿ ಕಲ್ಲಿನಿಂದ ಜಜ್ಜಿ ಭೀಕರವಾಗಿ ಹತ್ಯೆ ಮಾಡಲಾಗಿದೆ’ ಎಂದು ಕೊಲೆಯಾದ ವ್ಯಕ್ತಿಯ ಪತ್ನಿ ರೂಪಾವತಿ ದೂರು ನೀಡಿದ್ದಾರೆ.

ಆದರೆ, ಕೊಲೆಗೆ ಏನು ಕಾರಣ, ಯಾರು ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿ ಗೊತ್ತಾಗಿಲ್ಲ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಘಟನಾ ಸ್ಥಳಕ್ಕೆ ಎಎಸ್ಪಿ ಗೋಪಾಲ ಬ್ಯಾಕೋಡ್, ಡಿವೈಎಸ್ಪಿ ಡಾ.ದೇವರಾಜ ಬಿ. ಜತೆಗೆ ಶ್ವಾನದಳ ಕರೆಸಿ ಪರಿಶೀಲನೆ ನಡೆಸಿ ಕೊಲೆಗೈದ ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.

ಮಾರಕಾಸ್ತ್ರಗಳಿಂದ ಹೊಡೆದು ವ್ಯಕ್ತಿ ಕೊಲೆ

ಭಾಲ್ಕಿ: ತಾಲ್ಲೂಕಿನ ಶಿವಣಿ ಕ್ರಾಸ್ ಸಮೀಪ ಏ.27ರಂದು ಅನಿಲ್ ರಾಮ ಕಾಂಬಳೆ ಅವರನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಲೆಗೈಯಲಾಗಿದೆ.

‘ಮಂಗಳವಾರ ಸಂಜೆ ಕಾಸರತೂಗಾಂವ ಗ್ರಾಮದ ನಿವಾಸಿ ಆಗಿರುವ ಕುಲದೀಪ ದಿಲೀಪ ಸೂರ್ಯವಂಶಿ ಮನೆಗೆ ಬಂದು ಬಲವಂತವಾಗಿ ಅನಿಲ್ ಅವರನ್ನು ಬೈಕ್ ಮೇಲೆ ಕರೆದೊಯ್ದು ಶಿವಣಿ ಕ್ರಾಸ್ ಸಮೀಪ ಗೆಳೆಯರೊಂದಿಗೆ ಸೇರಿಕೊಂಡು ಮಾರಕಾಸ್ತ್ರಗಳಿಂದ ತಿವಿದು ಭೀಕರವಾಗಿ ಕೊಲೆ ಮಾಡಿದ್ದಾರೆ’ ಎಂದು ಕೊಲೆಯಾದ ವ್ಯಕ್ತಿಯ ಸಹದೋರ ಸುನೀಲ್ ರಾಮ ಕಾಂಬಳೆ ಬುಧವಾರ ನೀಡಿರುವ ದೂರಿನ ಮೇರೆಗೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು