ಶನಿವಾರ, ಸೆಪ್ಟೆಂಬರ್ 24, 2022
21 °C

ಬೃಹತ್‌ ರಾಷ್ಟ್ರೀಯ ಭಾವೈಕ್ಯ ನಡಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಧಾರ್ಮಿಕ ಮುಖಂಡರು ಹಾಗೂ ಸಾಮಾಜಿಕ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಬೃಹತ್‌ ರಾಷ್ಟ್ರೀಯ ಭಾವೈಕ್ಯ ನಡಿಗೆ ನಡೆಸಿದರು

 
ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ನಡಿಗೆಗೆ ಚಾಲನೆ ನೀಡಿ ಮಾತನಾಡಿ, ‘ಜಾತಿ, ಮತ, ಪಂಥ ಹಾಗೂ ಧರ್ಮಕ್ಕಿಂತ ಮಿಗಿಲಾಗುರುವುದು ದೇಶ. ‍ಪ್ರತಿಯೊಬ್ಬರೂ ರಾಷ್ಟ್ರ ಧ್ವಜವನ್ನು ಅಭಿಮಾನದಿಂದ ಹಾರಿಸಬೇಕು’ ಎಂದು ಮನವಿ ಮಾಡಿದರು.

 
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಕಿಶೋರ್ ಬಾಬು, ಭಂತೆ ಜ್ಞಾನಸಾಗರ, ಬಸವಲಿಂಗ ಪಟ್ಟದ್ದೇವರು, ಸಿದ್ದರಾಮ ಬೆಲ್ದಾಳ ಶರಣರು, ಶಿವಾನಂದ ಸ್ವಾಮೀಜಿ, ಅಕ್ಕ ಅನ್ನಪೂರ್ಣ, ರೆವರೆಂಡ್ ದೇವದಾನಂ, ಮೌಲನಾ ಅಬ್ದುಲ್ ಗಫಾರ್ ಮುಫ್ತಿ, ಮುಫ್ತಿ ಸೈಯದ್ ಶಿರಾಜೊದ್ದಿನ್, ಬಸವ ಪ್ರಭು ಸ್ವಾಮೀಜಿ ಭಂತೆ ಆರ್ಚೆಸಮತಿ ಭಾವೈಕ್ಯ ಸಂದೇಶ ನೀಡಿದರು.

 
ನಡಿಗೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಶಾಹೀನ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಅಬ್ದುಲ್ ಖದೀರ್, ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಎ.ಪಿ.ಎಂ.ಸಿ ಅಧ್ಯಕ್ಷ ವಿಜಯಕುಮಾರ ಆನಂದೆ, ಮುಖಂಡರಾದ ಅಬ್ದುಲ್ ಮನ್ನಾನ ಸೇಠ್, ಕರ್ನಾಟಕ ಕ್ರಿಶ್ಚಿಯನ್ ಫೆಡರೇಷನ್ ಅಧ್ಯಕ್ಷ ಶಿರೊಮಣಿ ಶ್ರೀಮಂಡಲ, ಪ್ರಮುಖರಾದ ಮುಬಾಶಿರ್ ಶಿಂದೆ, ಸರ್ಫರಾಜ ಹಾಸ್ಮಿ, ಮುಬಾಶಿರ್ ಅಬ್ಬು ಶೇಖ ಅನ್ಸರ್, ಶೇಖ ಆಬೆದ್ಅಲಿ, ಬುಡಾ ಮಾಜಿ ಅಧ್ಯಕ್ಷ ಸಂಜಯ ಜಾಗೀರದಾರ್, ಶೇಖ ಅದ್ನಾನ್ ಜಾಗೀರದಾರ್ ಶೇಖ ಶರ್ಫೊದ್ದಿನ್, ಮೊಹ್ಮದ್ ಜಾಫರ್ ಪಾಲ್ಗೊಂಡಿದ್ದರು.

 
ರಾಷ್ಟ್ರೀಯ ಭಾವೈಕ್ಯ ನಡಿಗೆ ಸಂದರ್ಭದಲ್ಲಿ ಡಾ.ಬಿ.ಆರ್ ಅಂಬೇಡ್ಕರ್, ಭಗತ್ ಸಿಂಗ್, ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಚೌಬಾರಾ ಸಮೀಪದ ಜಾಮಿಯಾ ಮಸೀದಿಯಿಂದ ಆರಂಭವಾದ ಮೆರವಣಿಗೆ ಮೆಹಮೂದ್ ಗವಾನ್‌ ಚೌಕ್‌, ಶಹಾಗಂಜ್‌, ಡಾ.ಅಂಬೇಡ್ಕರ್‌ ವೃತ್ತ, ಭಗತ್‌ಸಿಂಗ್‌ ವೃತ್ತದ ಮಾರ್ಗವಾಗಿ ಬಸವೇಶ್ವರ ವೃತ್ತಕ್ಕೆ ಬಂದು ಸಮಾರೋಪಗೊಂಡಿತು.

ಮುಸ್ಲಿಂ ಹುಮನ್ ರೈಟ್ಸ್ ಅಸೋಸಿಯೇಷನ್ ಅಧ್ಯಕ್ಷ ಸೈಯದ್ ವಹೀದ್ ಲಖನ್, ಬುದ್ಧ ಬೆಳಕು ಟ್ರಸ್ಟ್ ಅಧ್ಯಕ್ಷ ಮಹೇಶ ಗೋರನಾಳಕರ್ ಮುಂದಾಳತ್ವದಲ್ಲಿ ನಡಿಗೆ ನಡೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು