ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಾಯಕ ಹಣಕಾಸು ‌ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ

Last Updated 17 ಜೂನ್ 2022, 12:52 IST
ಅಕ್ಷರ ಗಾತ್ರ

ಬೀದರ್: ಇಲ್ಲಿಯ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಸಹಾಯಕ ಹಣಕಾಸು ‌ಅಧಿಕಾರಿ ಮೃತ್ಯುಂಜಯ ಚನ್ನಬಸಯ್ಯ ತಿರಾಣಿ ಅವರ ಮನೆ ಮೇಲೆ ಶುಕ್ರವಾರ ಎಸಿಬಿ ದಾಳಿ ನಡೆಸಿದ್ದಾರೆ.

ಮೃತ್ಯುಂಜಯ ಅವರು ಕಲಬುರಗಿ ಜಿಲ್ಲೆಯ ಕಮಲಾಪುರ ‌ತಾಲ್ಲೂಕಿನ ಮಹಾಗಾಂವ ಗ್ರಾಮದವರು. 2013ರಲ್ಲಿ ವಿಶ್ವವಿದ್ಯಾಲಯದಲ್ಲಿ ಸಹಾಯಕ ಹುದ್ದೆಗೆ ನೇಮಕಗೊಂಡಿದ್ದರು. ಇವರ ವಿರುದ್ಧ ಅನೇಕ ಭ‌್ರಷ್ಟಾಚಾರದ ಆರೋಪಗಳು ಇದ್ದವು. ಎಸಿಬಿ ಅಧಿಕಾರಿಗಳು ಏಕಕಾಲಕ್ಕೆ ಕಲಬುರಗಿ, ಮಹಾಗಾಂವ ಹಾಗೂ ಬೀದರ್‌ನಲ್ಲಿರುವ ಅವರ ಮನೆಗಳ ಮೇಲೆ ದಾಳಿ ಮಾಡಿ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವುದನ್ನು ಪತ್ತೆ ಮಾಡಿದ್ದಾರೆ.

ಪತ್ನಿ ಹಾಗೂ ಮಾವನ ಹೆಸರಿನಲ್ಲೂ ಆಸ್ತಿ ಮಾಡಿದ್ದಾರೆ. ಆರು ತಿಂಗಳ ಹಿಂದೆ ಬೀದರ್‌ನ ಗುಮ್ಮಾ ಕಾಲೊನಿಯಲ್ಲಿ ದೊಡ್ಡ ಮನೆ ನಿರ್ಮಾಣ ಮಾಡಿದ್ದಾರೆ. ಬೀದರ್‌ ಹಾಗೂ ಕಲಬುರಗಿಯಲ್ಲಿ ಒಟ್ಟು 5 ನಿವೇಶನ ಹೊಂದಿದ್ದಾರೆ. ₹45 ಲಕ್ಷ ಠೇವಣಿ, 12 ತೊಲ ಚಿನ್ನಾಭರಣ, ಬೆಳ್ಳಿಯ ಆಭರಣಗಳು ಪತ್ತೆಯಾಗಿವೆ. ಎಸಿಬಿ ಅಧಿಕಾರಿಗಳು ದಾಖಲೆ ಪರಿಶೀಲಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT