ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗೆ ಕಟ್ಟಿ ಹಾಕಿದ ಪ್ರಕರಣ: ಪೊಲೀಸರಿಗೆ ದೂರು

ತಪ್ಪಿತಸ್ಥರ ವಿರುದ್ಧ ಪಿಎಸ್‌ಐ ಕ್ರಮದ ಭರವಸೆ
Last Updated 20 ಜೂನ್ 2021, 2:36 IST
ಅಕ್ಷರ ಗಾತ್ರ

ಔರಾದ್: ಬಿತ್ತನೆ ಬೀಜ ವಿತರಣೆ ಸಂಬಂಧ ಇಲ್ಲಿಯ ಕೃಷಿ ಅಧಿಕಾರಿ ಭೀಮರಾವ ಸಿಂಧೆ ಅವರನ್ನು ಕಟ್ಟಿಹಾಕಿದ ಪ್ರಕರಣ ಸ್ಥಳೀಯ ಠಾಣೆಗೆ ದೂರು ನೀಡಲಾಗಿದೆ. ಸ್ವತಃ ಸಿಂಧೆ ಅವರು ಶನಿವಾರ ಠಾಣೆಗೆ ಭೇಟಿ ನೀಡಿ ದೂರು ದಾಖಲಿಸಿದ್ದಾರೆ.

‘ಜೂನ್‌ 17ರಂದು ರೈತ ಸಂಪರ್ಕ ಕೇಂದ್ರಕ್ಕೆ ಬಂದ ರೈತರು ಬೀಜ ಕೊಡಲು ಕೇಳಿದರು. ಸದ್ಯ ಬೀಜದ ದಾಸ್ತಾನು ಇಲ್ಲ ಎಂದು ಮನವರಿಕೆ ಮಾಡಿದೆ. ಆದರೆ, ಅವರಲಿದ್ದ ಕೆಲವರು ಘೋಷಣೆ ಕೂಗಿ ಬೇಕಾಬಿಟ್ಟಿ ಮಾತನಾಡಿದರು. ನೀವು ಹೊರಗೆ ಬನ್ನಿ ಕಚೇರಿಗೆ ಬೀಗ ಹಾಕುತ್ತೇವೆ ಎಂದು ಹೊರ ಕಳುಹಿಸಿದರು. ನನ್ನನ್ನು ಬಲವಂತದಿಂದ ಹಿಡಿದು ಗೇಟಿಗೆ ಕಟ್ಟಿ ಹಾಕಿ ವಿಡಿಯೊ ಮಾಡಿದರು. ಈ ಘಟನೆಯಿಂದ ನನ್ನ ಮನಸ್ಸಿಗೆ ಅಘಾತವಾಗಿದೆ. ನನ್ನ ರಕ್ತದೊತ್ತಡ ಹೆಚ್ಚಾಗಿದೆ. ವಾರದ ಹಿಂದೆಯಷ್ಟೇ ಕೊರೊನಾ ಸೋಂಕಿನಿಂದ ಹೊರ ಬಂದಿರುವುದರಿಂದ ಈಗ ನನಗೆ ಮತ್ತಷ್ಟು ನಿಶ್ಯಕ್ತಿಯಾಗಿ ಆರೋಗ್ಯ ಕೆಟ್ಟಿದೆ’ ಎಂದು ದೂರಿನಲ್ಲಿ ವಿವರಿಸಿದ್ದಾರೆ.

‘ಕೃಷಿ ಅಧಿಕಾರಿ ಸಿಂಧೆ ಕೊಟ್ಟ ದೂರು ದಾಖಲಿಸಿಕೊಳ್ಳುತ್ತೇವೆ. ಅವರ ಹೇಳಿಕೆ ಹಾಗೂ ಅಂದಿನ ನೈಜ ಘಟನೆ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಪಿಎಸ್‍ಐ ಮಂಜುನಾಥಗೌಡ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT