ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌- ಏರ್ ಕಾಮಾಡೋರ್ ಅಭಿಜಿತ್ ನೇನೆ ಅಧಿಕಾರ ಸ್ವೀಕಾರ

Last Updated 1 ಫೆಬ್ರುವರಿ 2023, 12:43 IST
ಅಕ್ಷರ ಗಾತ್ರ

ಬೀದರ್‌: ಏರ್ ಕಾಮಾಡೋರ್ ಅಭಿಜಿತ್ ನೇನೆ ಅವರು ವಾಯು ಪಡೆ ಬೀದರ್ ನೆಲೆಯ ಏರ್ ಆಫೀಸರ್ ಕಮಾಂಡಿಂಗ್ ಆಗಿ ಬುಧವಾರ ಅಧಿಕಾರ ವಹಿಸಿಕೊಂಡರು.

ನಿರ್ಗಮಿತ ಏರ್ ಕಾಮಾಡೋರ ಸಮೀರ್ ಸೋಂಧಿ ಅವರು ತಮ್ಮ ಕಾರ್ಯಾಲಯದಲ್ಲಿ ಅಭಿಜಿತ್ ನೇನೆ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು.

ಏರ್ ಕಾಮಾಡೋರ್ ಅಭಿಜಿತ್ ನೇನೆ ಅವರು ಯುದ್ಧ ವಿಮಾನ ಪೈಲಟ್ ಆಗಿ 1993, ಜೂನ್ 21 ರಂದು ಸೇರ್ಪಡೆ ಯಾದರು. ಅವರು ಕ್ಯಾಟ್ ಎ ಶೈಕ್ಷಣಿಕ ಅರ್ಹತೆ ಹೊಂದಿರುವ ವಿಮಾನ ಹಾರಾಟ ತರಬೇತುದಾರರಾಗಿದ್ದಾರೆ. ಐದು ಸಾವಿರ ಗಂಟೆ ಗಳಿಗೂ ಹೆಚ್ಚು ವಿಮಾನ ಹಾರಾಟದ ಅನುಭವ ಇದೆ. ಜಾಗವಾರ, ಹಂಟರ್, ಕಿರಣ್ ಹಾಗೂ ಎಚ್‌ಪಿಟಿ 32 ವಿಮಾನಗಳನ್ನು ಹಾರಾಟ ಮಾಡಿದ ಅನುಭವ ಇದೆ.

ರಾಷ್ಟ್ರೀಯ ರಕ್ಷಣಾ ಅಕಾಡೆಮಿ, ಮಲೇಶಿಯದ ಕೌಲಾಲಂಪುರದ ತರಬೇತಿ ಕಾಲೇಜ್, ಮಧ್ಯಪ್ರದೇಶದ ಯುದ್ಧ ಕಾಲಿನ ಮಿಲಿಟರಿ ಮುಖ್ಯಸ್ಥಾನ (ಮಹೋವು) ನಲ್ಲಿರುವ ಸೇನಾ ಯುದ್ಧ ತರಬೇತಿ ಕಾಲೇಜು ಗಳಲ್ಲಿ ತರಬೇತಿ ಪಡೆದಿದ್ದಾರೆ.

ಬೀದರ್ ಗೆ ಬರುವ ಮೊದಲು ಇವರು ವಾಯು ಸೇನಾ ತರಬೇತುದಾರರ ಶಾಲೆ, ಯುದ್ಧ ತಂತ್ರ ಹಾಗೂ ವಾಯು ಸೇನಾ ಯುದ್ಧ ಕಲೆ ಸಂಶೋಧನಾ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರು ಜಾಗವಾರ ತಂಡ ಹಾಗೂ ಸಿಗ್ನಲ್ ತಂಡದ ಮುಖ್ಯಸ್ಥ ರಾಗಿ ಸೇವೆ ಸಲ್ಲಿಸಿದ್ದಾರೆ. ಅವರಿಗೆ ವಿಶಿಷ್ಟ ಸೇವಾ ಪದಕ ನೀಡಿ ಗೌರವಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT