ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಮೆಜಾನ್‌ ಡೆಲಿವರಿ ಬಾಯ್‌ ಮೇಲೆ ಹಲ್ಲೆ: 12 ಜನರ ವಿರುದ್ಧ ಪ್ರಕರಣ, ನಾಲ್ವರ ಬಂಧನ

Published : 21 ಆಗಸ್ಟ್ 2024, 9:00 IST
Last Updated : 21 ಆಗಸ್ಟ್ 2024, 9:00 IST
ಫಾಲೋ ಮಾಡಿ
Comments

ಬೀದರ್: ಅಮೆಜಾನ್‌ ಡೆಲಿವರಿ ಬಾಯ್‌ ಹಾಗೂ ಸಿಬ್ಬಂದಿ ಮೇಲೆ ಯುವಕರ ಗುಂಪೊಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿರುವ ಘಟನೆ ನಗರದ ನ್ಯೂ ಆದರ್ಶ ಕಾಲೊನಿಯಲ್ಲಿ ನಡೆದಿದೆ.

ನಗರದ ಗೌಳಿ ಗಲ್ಲಿಯ ವಿಜಯಕುಮಾರ್‌ ಗೌಳಿ, ಸಿಬ್ಬಂದಿ ರೋಹನ್‌ ಹಲ್ಲೆಗೊಳಗಾಗಿದ್ದಾರೆ. ವಿಜಯಕುಮಾರ್‌ ಅವರ ಮುಖ ಹಾಗೂ ದೇಹದ ಇತರೆ ಭಾಗಗಳಿಗೆ ಗಾಯಗಳಾದರೆ, ರೋಹನ್‌ ಗೂ ಘಟನೆಯಲ್ಲಿ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆಗೆ ಸಂಬಂಧಿಸಿದಂತೆ ಗಾಂಧಿ ಗಂಜ್‌ ಪೊಲೀಸ್‌ ಠಾಣೆಯಲ್ಲಿ ನಗರದ ಭದ್ರೊದ್ದಿನ್‌ ಕಾಲೊನಿಯ ಮೊಹಮ್ಮದ್‌ ಅದ್ನಾನ್‌ ಹಾಗೂ ಇತರೆ 12 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ನಾಲ್ವರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಇನ್ನುಳಿದವರ ಪತ್ತೆಗೆ ಹುಡುಕಾಟ ನಡೆಸಿದ್ದಾರೆ.

‘ನಗರದ ಓಲ್ಡ್‌ ಆದರ್ಶ ಕಾಲೊನಿಯಲ್ಲಿ ಮಂಗಳವಾರ ವಿಜಯಕುಮಾರ್‌ ಡೆಲಿವರಿಗೆ ಹೋಗಿದ್ದಾಗ, ಬೈಕ್‌ ಪರಸ್ಪರ ತಾಕಿದ್ದರಿಂದ ಕೆಲವರು ಜಗಳ ಮಾಡಿಕೊಳ್ಳುತ್ತಿದ್ದರು. ಇದನ್ನು ನೋಡಿ ವಿಜಯಕುಮಾರ್‌ ಮಧ್ಯ ಪ್ರವೇಶಿಸಿ ಈ ರೀತಿ ಜಗಳವಾಡದಂತೆ ಸಲಹೆ ಮಾಡಿ ತೆರಳಿದ್ದಾರೆ. ಆನಂತರ ಯುವಕರ ಗುಂಪು ಅವರ ಬೆನ್ನಟ್ಟಿ ಅಮೆಜಾನ್‌ ಕಚೇರಿಗೆ ಹೋಗಿ ಹಲ್ಲೆ ನಡೆಸಿದ್ದಾರೆ. ಇದು ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ. ಈಗಾಗಲೇ ನಾಲ್ವರನ್ನು ಬಂಧಿಸಲಾಗಿದ್ದು, ಇನ್ನುಳಿದವರ ಬಂಧನಕ್ಕೆ ಹುಡುಕಾಟ ನಡೆದಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ್‌ ಗುಂಟಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಓಲ್ಡ್‌ ಆದರ್ಶ ಕಾಲೊನಿಯಲ್ಲಿ ಮಂಗಳವಾರ ಮಧ್ಯಾಹ್ನ ವಸ್ತುಗಳ ಡೆಲಿವರಿಗೆ ಬೈಕ್‌ನಲ್ಲಿ ಹೋಗಿದ್ದೆ. ಈ ವೇಳೆ ರಸ್ತೆಯಲ್ಲಿ ಸೀನಿಯರ್‌ ಸಿಟಿಜನ್‌ ಜೊತೆ ಮೂರ್ನಾಲ್ಕು ಜನ ಯುವಕರು ಜಗಳವಾಡುತ್ತಿದ್ದರು. ಅವರ ನೆರವಿಗೆ ನಾನು ಹೋಗಿದ್ದೆ. ಯುವಕರು ಅವರನ್ನು ಬಿಟ್ಟು ನನ್ನೊಂದಿಗೆ ಜಗಳಕ್ಕಿಳಿದು, ಅವಾಚ್ಯ ಶಬ್ದಗಳಿಂದ ನಿಂದಿಸಲು ಶುರು ಮಾಡಿದರು. ನಾನು ಅಲ್ಲಿಂದ ತಪ್ಪಿಸಿಕೊಂಡು ಬಂದೆ. ಅವರು ಬೆನ್ನಟ್ಟಿ ನನ್ನ ಕಚೇರಿಗೆ ಬಂದು ಅವಾಚ್ಯ ಶಬ್ದಗಳಿಂದ ಬೈಯ್ದು ಹಲ್ಲೆ ನಡೆಸಿದ್ದಾರೆ. ಈ ವೇಳೆ ಕಚೇರಿಯಲ್ಲಿರುವ ರೋಹನ್‌ ಮೇಲೂ ಹಲ್ಲೆ ಮಾಡಿದ್ದು, ಸಣ್ಣಪುಟ್ಟ ಗಾಯಗಳಾಗಿವೆ’ ಎಂದು ವಿಜಯಕುಮಾರ್‌ ದೂರಿನಲ್ಲಿ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಗಾಂಧಿ ಗಂಜ್‌ ಠಾಣೆಯ ಪೊಲೀಸ್‌ ಇನ್‌ಸ್ಪೆಕ್ಟರ್‌ ಹನುಮ ರೆಡ್ಡಿ ಅವರು ಅಮೆಜಾನ್‌ ಕಚೇರಿಗೆ ಭೇಟಿ ಕೊಟ್ಟು, ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಹಿಂದೂ ಯುವಕನ ಮೇಲೆ ಮುಸ್ಲಿಂ ಯುವಕರ ಗುಂಪು ಹಲ್ಲೆ ನಡೆಸಿದ್ದು, ಹಿಂದೂಗಳಿಗೆ ಭದ್ರತೆ ಇಲ್ಲದಂತಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ.

[3:03 PM, 8/21/2024] ಶಶಿಕಾಂತ ಎಸ್.‌ ಶೆಂಬೆಳ್ಳಿ: ಮತ್ತೆ ಮೂವರನ್ನು ಬಂಧಿಸಿದ್ದು, ಒಟ್ಟು ನಾಲ್ವರ ಬಂಧನವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT