ಔರಾದ್: ತೆಲಂಗಾಣ ಗಡಿಯಲ್ಲಿರುವ ತಾಲ್ಲೂಕಿನ ಜಂಬಗಿ ಶಿವಾರದಲ್ಲಿ ಪೊಲೀಸರು ದಾಳಿ ಮಾಡಿ ಅಕ್ರಮವಾಗಿ ಸಾಗಿಸುತ್ತಿದ್ದ 20 ಕೆ.ಜಿ. ತೂಕದ ₹ 10.31 ಲಕ್ಷ ಮೌಲ್ಯದ ಗಾಂಜಾ ಪ್ಯಾಕೆಟ್ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಪ್ರಕರಣ ಸಂಬಂಧ ಜಂಬಗಿಯ ಘಾಮಾ ತಾಂಡಾದ ಇಬ್ಬರು ಹಾಗೂ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಸೂರಥಾ ತಂಡಾದ ಒಬ್ಬ ವ್ಯಕ್ತಿಯನ್ನು ಬುಧವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ತೆಲಂಗಾಣದ ಹಂಗರಗಾ ಕಡೆಯಿಂದ ಬರುತ್ತಿದ್ದ ಆಟೋ ಮೇಲೆ ದಾಳಿ ಮಾಡಿದ ಪೊಲೀಸರು, ಅದರಲ್ಲಿ ಕಂಡು ಬಂದ ಪ್ಯಾಕೆಟ್ಗಳು ಪರಿಶೀಲಿಸಲಾಗಿ ಗಾಂಜಾ ಇರುವುದು ಬೆಳಕಿಗೆ ಬಂದಿದೆ. ಒಟ್ಟು 20 ಕೆ.ಜಿ ತೂಕದ ಪ್ಯಾಕೆಟ್ಗಳಿದ್ದು, ಅವುಗಳ ಒಟ್ಟು ಮೌಲ್ಯ 10.31 ಲಕ್ಷ ಆಗಿದೆ.
ಜಿಲ್ಲಾ ಪೊಲೀಸ್ ವರಿಷ್ಠ ಪ್ರದೀಪ ಗುಂಟಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಂತಪೂರ ಪಿಎಸ್ಐ ದಿನೇಶ ಹಾಗೂ ಪೊಲೀಸರ ತಂಡ ಈ ದಾಳಿ ನಡೆಸಿದೆ. ಸಂತಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.