ಜೂನ್ 15ರಿಂದ ಮತ್ತೆ ಬೆಂಗಳೂರು– ಬೀದರ್ ವಿಮಾನ ಸೇವೆ

ಬೀದರ್: ಸ್ಟಾರ್ ಏರ್ ಸಂಸ್ಥೆಯು ಜೂನ್ 15ರಿಂದ ಬೆಂಗಳೂರು– ಬೀದರ್ ನಡುವೆ ವಿಮಾನಯಾನ ಆರಂಭಿಸಲಿದೆ ಎಂದು ಕೇಂದ್ರ ರಸಗೊಬ್ಬರ ಖಾತೆ ಸಚಿವ ಭತವಂತ ಖೂಬಾ ತಿಳಿಸಿದ್ದಾರೆ.
ಸ್ಟಾರ್ ಏರ್ ಸಂಸ್ಥೆ ವಿಮಾನ ಹಾರಾಟ ಆರಂಭಿಸುವುದನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಖಚಿತ ಪಡಿಸಿದೆ. ವಿವರ ಮಾಹಿತಿಯನ್ನು ಶೀಘ್ರದಲ್ಲೇ ಕಳಿಸುವುದಾಗಿ ಸಂದೇಶ ಕಳಿಸಿದ್ದಾರೆ ಎಂದು ಹೇಳಿದ್ದಾರೆ.
ಕೋವಿಡ್ ಕಾರಣ ಬೀದರ್–ಬೆಂಗಳೂರು ವಿಮಾನ ಹಾರಾಟ ನಿಂತಿದೆ. ಟ್ರೂಜೆಟ್ ವಿಮಾನ ಸೇವೆ ಆರಂಭಿಸುತ್ತಿಲ್ಲ. ವಿಮಾನಯಾನ ಸಚಿವಾಲಯದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ನಂತರ ಅಧಿಕಾರಿಗಳು ಬೇರೆ ಕಂಪನಿಯ ವಿಮಾನ ಸೇವೆ ಒದಗಿಸಲು ಒಪ್ಪಿಕೊಂಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.