ನನೆಗುದಿಗೆ ಬಿದ್ದ ಬಂಜಾರ ಬುಡಕಟ್ಟು ಉದ್ಯಾನ 

7
34 ಎಕರೆ ಜಾಗದಲ್ಲಿ ₹106 ಕೋಟಿ ಮೊತ್ತದ ಕಾಮಗಾರಿ

ನನೆಗುದಿಗೆ ಬಿದ್ದ ಬಂಜಾರ ಬುಡಕಟ್ಟು ಉದ್ಯಾನ 

Published:
Updated:
Deccan Herald

ಚಿಟಗುಪ್ಪ: ತಾಲ್ಲೂಕಿನ ಬೋರಂಪಳ್ಳಿ ಗ್ರಾಮದ ಹೊರವಲಯದಲ್ಲಿ ಬಂಜಾರ ಸಮುದಾಯದ ಪಾರಂಪರಿಕ ಕಲೆ, ಸಂಸ್ಕೃತಿಗಳ ಉಳಿವು ಹಾಗೂ ಅವುಗಳ ಮೂಲಕ ಯುವಜನಾಂಗಕ್ಕೆ ಉದ್ಯೋಗ ಸೃಷ್ಟಿಯ ಉದ್ದೇಶಕ್ಕಾಗಿ ಎರಡು ವರ್ಷಗಳ ಹಿಂದೆ ಕೈಗೆತ್ತಿಕೊಂಡಿರುವ ಬಂಜಾರ ಬುಡಕಟ್ಟು ಉದ್ಯಾನ ಕಾಮಗಾರಿ ಇದುವರೆಗೂ ಪೂರ್ಣಗೊಂಡಿಲ್ಲ.

2016ರಲ್ಲಿ ಗ್ರಾಮದ ಸರ್ವೆ ನಂಬರ್ 106ರಲ್ಲಿ 34 ಎಕರೆ ಪ್ರದೇಶದಲ್ಲಿ ₹106 ಕೋಟಿ ವೆಚ್ಚದಲ್ಲಿ ಉದ್ಯಾನ ನಿರ್ಮಾಣ ಕಾಮಗಾರಿಗೆ ಅಂದಿನ ಹುಮನಾಬಾದ್ ಶಾಸಕ ರಾಜಶೇಖರ ಪಾಟೀಲ, ಚಿಂಚೋಳಿ ಶಾಸಕ ಉಮೇಶ್ ಜಾಧವ್‌ ಶಂಕು ಸ್ಥಾಪನೆ ನೆರವೇರಿಸಿದ್ದರು.

ಲಂಬಾಣಿ ಸಮುದಾಯದ ಯುವಜನಾಂಗಕ್ಕೆ ಉದ್ಯಾನದಲ್ಲಿ ಲಂಬಾಣಿ ಸಂಪ್ರದಾಯದ ಉಡುಪು ಕಸೂತಿ, ಹೊಲಿಗೆ, ಹೈನುಗಾರಿಕೆ, ಹಣ್ಣು ತರಕಾರಿ ಇತರ ಕೌಶಲಗಳ ಬಗ್ಗೆ ತರಬೇತಿ ಹಾಗೂ ಸಿದ್ಧಪಡಿಸಿದ ಉತ್ಪನ್ನಗಳ ಮಾರಾಟ  ಘಟಕವೂ ನಿರ್ಮಿಸಲಾಗುತ್ತಿದೆ.

ಸದ್ಯಕ್ಕೆ ಬೆಲೆ ಬಾಳುವ ಯಂತ್ರಗಳು, ಕಟ್ಟಡ ಸಾಮಗ್ರಿಗಳು ಸೂಕ್ತ ಸ್ಥಳಾವಕಾಶ ಇಲ್ಲದಕ್ಕೆ ಎಲ್ಲೆಂದರಲ್ಲಿ ಹಾಕಲಾಗಿದೆ. ಅವುಗಳಿಗೆ ಆಸರೆ ಇಲ್ಲದಕ್ಕೆ ಹಾಳಾಗುತ್ತಿವೆ. ಕೆಲವು ಕಟ್ಟಡಗಳ ಕಾಮಗಾರಿ ಅರ್ಧಕ್ಕೆ ನಿಂತಿವೆ. ಕಬ್ಬಿಣದ ಸಲಾಕೆಗಳು ತುಕ್ಕು ಹಿಡಿಯುತ್ತಿವೆ.

ಸಂಬಂಧಿಸಿದ ಗುತ್ತಿಗೆದಾರರು ಇಲಾಖೆ ಎಚ್ಚೆತ್ತು ತಕ್ಷಣ ಕಾಮಗಾರಿ ಆರಂಭಿಸಿ, ಲಂಬಾಣಿ ಸಮುದಾಯದ ಪ್ರಗತಿಗೆ ನೆರವಾಗಬೇಕು ಎಂದು ಬಂಜಾರ ಸಮಾಜದ ಮುಖಂಡರು ಒತ್ತಾಯಿಸಿದ್ದಾರೆ.

ಸರ್ಕಾರ ಬಂಜಾರ ಜನಾಂಗದ ಆರ್ಥಿಕ ಪ್ರಗತಿಗಾಗಿ ನಮ್ಮ ಕುಲ ಕಸುಬುಗಳ ಉತ್ತೇಜನಕ್ಕಾಗಿ ನಿರ್ಮಿಸುತ್ತಿರುವ ಬೋರಂಪಳ್ಳಿ ಗ್ರಾಮದಲ್ಲಿಯ ಉದ್ಯಾನ ಅಧಿಕಾರಿಗಳ ನಿರಾಸಕ್ತಿಯಿಂದ ನನೆಗುದಿಗೆ ಬಿದ್ದಿದೆ
- ಅನೀಲ ರಾಠೋಡ್, ಭಾದ್ಲಾಪುರ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !