ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಕಲ್ಯಾಣ: ಅಗ್ನಿ ಆಕಸ್ಮಿಕ– ಅಪಾರ ಹಾನಿ

Published 3 ಜನವರಿ 2024, 13:51 IST
Last Updated 3 ಜನವರಿ 2024, 13:51 IST
ಅಕ್ಷರ ಗಾತ್ರ

ಬಸವಕಲ್ಯಾಣ: ಈಶ್ವರ ನಗರದಲ್ಲಿನ ಐದು ಅಂಗಡಿಗಳಿಗೆ ಮಂಗಳವಾರ ರಾತ್ರಿ ಬೆಂಕಿ ಹೊತ್ತಿಕೊಂಡಿದ್ದರಿಂದ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.

ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು ಖುರ್ಷಿದ್ ಮತ್ತು ರಶೀದ್ ಎನ್ನುವವರ ಕೃಷಿ ಪರಿಕರ ಮತ್ತು ಪೀಠೋಪಕರಣ ಅಂಗಡಿಗಳು ಭಸ್ಮವಾಗಿವೆ.

ನಗರದ ಅಗ್ನಿಶಾಮಕ ಠಾಣೆಯವರು ತಕ್ಷಣ ಸ್ಥಳಕ್ಕೆ ಧಾವಿಸಿ ಕ್ರಮ ತೆಗೆದುಕೊಂಡಿದ್ದಾರೆ. ಆದರೆ ಒಂದರಿಂದ ಇನ್ನೊಂದು ಅಂಗಡಿಗೆ ಬೆಂಕಿ ಹರಡುತ್ತಿದ್ದರಿಂದ ಹುಮನಾಬಾದ್‌ನಲ್ಲಿನ ಅಗ್ನಿಶಾಮಕ ಠಾಣೆಯವರನ್ನೂ ಕರೆಸಿ ಬೆಳಗಿನ ಜಾವದವರೆಗೂ ಬೆಂಕಿ ನಂದಿಸಲು ಪ್ರಯತ್ನಿಸಲಾಯಿತು.

ಪೊಲೀಸ್ ಠಾಣೆಯವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT