ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಸವಕಲ್ಯಾಣ | ಅದ್ದೂರಿ ಮೆರವಣಿಗೆ ಮೂಲಕ ಗಣೇಶ ವಿಸರ್ಜನೆ

Published : 17 ಸೆಪ್ಟೆಂಬರ್ 2024, 16:00 IST
Last Updated : 17 ಸೆಪ್ಟೆಂಬರ್ 2024, 16:00 IST
ಫಾಲೋ ಮಾಡಿ
Comments

ಬಸವಕಲ್ಯಾಣ: ಹನ್ನೊಂದನೇ ದಿನದ ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನಾ ಕಾರ್ಯಕ್ರಮ ನಗರದಲ್ಲಿ ಅದ್ದೂರಿಯಾಗಿ ನಡೆಯಿತು.

ಸದಾನಂದ ಸರಾಫ್ ಮತ್ತು ಸುವರ್ಣಕಾರ ಸಂಘದ ಗಣೇಶ ಒಳಗೊಂಡು ಅರ್ಧದಷ್ಟು ಗಣೇಶ ಮೂರ್ತಿಗಳ ಮಂಗಳವಾರ ಸಂಜೆಯವರೆಗೆ ಪೂರ್ಣಗೊಂಡಿತ್ತು. ಇನ್ನುಳಿದ ಅರ್ಧದಷ್ಟು ಮೂರ್ತಿಗಳ ಮೆರವಣಿಗೆ ರಾತ್ರಿ 8 ಗಂಟೆಯ ನಂತರ ಆರಂಭವಾಯಿತು.

ಸದಾನಂದ ಸರಾಫ್ ಬಜಾರ್ ಗಣೇಶ ಮಂಡಳದಿಂದ ಅನ್ನದಾಸೋಹ ನಡೆಸಿ ಗಣೇಶ ಮೆರವಣಿಗೆ ಆರಂಭಿಸಲಾಯಿತು.

ಬಸವಣ್ಣನ ಪರುಷಕಟ್ಟೆ ಗಣೇಶ ಮಂಡಳ, ಮಲ್ಲಿಕಾರ್ಜುನ ಓಣಿ, ವಿಠಲ್ ಮಂದಿರ್, ಹರಳಯ್ಯ ಚೌಕ್ ಗಣೇಶ ಮಂಡಳ, ಮಾಂಗಗಾರುಡಿ ಗಲ್ಲಿ, ಅಷ್ಟವಿನಾಯಕ ಮಂಡಳ, ಶರಣನಗರ ಓಣಿಯ ಸುಡುಗಾಡು ಸಿದ್ಧ ಗಣೇಶ ಮಂಡಳ ಒಳಗೊಂಡು 10ಕ್ಕೂ ಅಧಿಕ ಮಂಡಳಗಳವರು ಸಂಜೆಯವರೆಗೆ ಗಣೇಶ ವಿಸರ್ಜಿಸಿದರು.

ಗಣೇಶಗಳನ್ನು ಪುಷ್ಪಗಳಿಂದ ಅಲಂಕೃತ‌ ವಾಹನಗಳಲ್ಲಿ ಇಡಲಾಗಿತ್ತು. ಬ್ಯಾಂಡ್ ಬಾಜಾ, ಡಿ.ಜೆ, ಹಲಗೆ‌, ಡೊಳ್ಳು ಕುಣಿತ ಮತ್ತಿತರೆ ವಾದ್ಯ ಮೇಳಗಳೊಂದಿಗೆ ಮೆರವಣಿಗೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT