ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಗವಂತ ಖೂಬಾ ಕೇಂದ್ರ ಸಚಿವರಾಗಿ ಇಂದಿಗೆ ಒಂದು ವರ್ಷ

ಬೀದರ್ ಲೋಕಸಭಾ ಕ್ಷೇತ್ರಕ್ಕೆ ಹಲವು ಕೊಡುಗೆ
Last Updated 7 ಜುಲೈ 2022, 4:48 IST
ಅಕ್ಷರ ಗಾತ್ರ

ಬೀದರ್: ಸಂಸದ ಭಗವಂತ ಖೂಬಾ ಅವರು ಕೇಂದ್ರದ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವರಾಗಿ ಗುರುವಾರ (ಜು.7) ಒಂದು ವರ್ಷ ಪೂರ್ಣಗೊಳಿಸಲಿದ್ದಾರೆ.

ಎಂಟು ವರ್ಷ ಸಂಸದ ಹಾಗೂ ಒಂದು ವರ್ಷ ಕೇಂದ್ರ ಸಚಿವರಾಗಿ ಅವರು ಬೀದರ್ ಲೋಕಸಭಾ ಕ್ಷೇತ್ರಕ್ಕೆ ಹತ್ತು ಹಲವು ಕೊಡುಗೆಗಳನ್ನು ನೀಡಿದ್ದಾರೆ.

ಬೀದರ್‌ಗೆ ₹90 ಕೋಟಿ ವೆಚ್ಚದಲ್ಲಿ ಸಿಪೆಟ್ ಮಂಜೂರಾತಿ, ಎರಡು ದಶಕಗಳ ಕನಸಾಗಿದ್ದ ಬೀದರ್‌ನಿಂದ ನಾಗರಿಕ ವಿಮಾನಯಾನ ಸೇವೆ ಆರಂಭ, ₹1,392 ಕೋಟಿ ವೆಚ್ಚದಲ್ಲಿ ಬೀದರ್-ಕಲಬುರಗಿ ರೈಲು ಮಾರ್ಗ ಪೂರ್ಣ, 13 ಹೊಸ ರೈಲುಗಳ ಆರಂಭ, ಬೀದರ್-ನಾಂದೇಡ್ ರೈಲು ಮಾರ್ಗ ಮಂಜೂರಾತಿ, ₹275 ಕೋಟಿ ವೆಚ್ಚದಲ್ಲಿ ಬೀದರ್‍ನಲ್ಲಿ ಯುಜಿಡಿ ಕಾಮಗಾರಿ, ₹125 ಕೋಟಿ ವೆಚ್ಚದಲ್ಲಿ ಸಿ.ಎನ್.ಜಿ. ಕಾಮಗಾರಿ, ಆಳಂದದಲ್ಲಿ ಮಣ್ಣು ಪರೀಕ್ಷಾ ಕೇಂದ್ರ ಖೂಬಾ ಅವರ ಅಭಿವೃದ್ಧಿ ಕಾರ್ಯಗಳಲ್ಲಿ ಸೇರಿವೆ.

ತಮ್ಮ ಅಧಿಕಾರ ಅವಧಿಯಲ್ಲಿ ಕ್ಷೇತ್ರದ ಅರ್ಹ ಫಲಾನುಭವಿಗಳಿಗೆ ಕೇಂದ್ರದ ವಿವಿಧ ಯೋಜನೆಗಳ ಲಾಭ ತಲುಪಿಸಿದ ತೃಪ್ತಿ ತಮಗಿದೆ ಎಂದು ಕೇಂದ್ರ ಸಚಿವ ಖೂಬಾ ಹೇಳುತ್ತಾರೆ.
ಕ್ಷೇತ್ರದಲ್ಲಿ ₹3 ಸಾವಿರ ಕೋಟಿ ವೆಚ್ಚದಲ್ಲಿ 659 ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಗೊಳ್ಳಲಿದೆ. ಗ್ರಾಮ ಸಡಕ್ ಯೋಜನೆಯಡಿ ₹135 ಕೋಟಿ ವೆಚ್ಚದಲ್ಲಿ 385 ಕಿ.ಮೀ. ಗ್ರಾಮೀಣ ರಸ್ತೆಗಳು ನಿರ್ಮಾಣಗೊಳ್ಳುತ್ತಿವೆ ಎಂದು ತಿಳಿಸುತ್ತಾರೆ.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಕ್ಷೇತ್ರದ ರೈತರ ಖಾತೆಗೆ ₹550 ಕೋಟಿ ಪ್ರೋತ್ಸಾಹ ಧನ ಜಮೆಯಾಗಿದೆ. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ₹515 ಕೋಟಿ ಬೆಳೆ ಪರಿಹಾರ ದೊರಕಿದೆ. ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ 3,55,231 ಬಡವರಿಗೆ ಉಚಿತ ಗ್ಯಾಸ್ ಸಿಲಿಂಡರ್‌ಗಳನ್ನು ಒದಗಿಸಲಾಗಿದೆ ಎಂದು ತಿಳಿಸುತ್ತಾರೆ.

ಜಿಲ್ಲೆಯ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಕೇಂದ್ರ ಸಚಿವರಾದ ಹಿರಿಮೆ ಖೂಬಾ ಅವರದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT