ಔರಾದ್ (ಬೀದರ್ ಜಿಲ್ಲೆ): ಈ ಭಾಗದ ಆರಾಧ್ಯ ದೇವ ಅಮರೇಶ್ವರ ದೇವರ ರಥೋತ್ಸವ ಮಂಗಳವಾರ ನಸುಕಿನ ಜಾವ ಸಡಗರ, ಸಂಭ್ರಮದಿಂದ ನೆರವೇರಿತು.

ಓಂ ಭಲಾ, ಶಂಕರ್ ಭಲಾ ಜಯಘೋಷಗಳೊಂದಿಗೆ ಭಕ್ತರು ಶ್ರದ್ಧಾ, ಭಕ್ತಿಯಿಂದ ತೆರೆ ಎಳೆದರು.

ನಸುಕಿನಲ್ಲಿ ನಡೆದ ರಥೋತ್ಸವಕ್ಕೆ ವಿವಿಧ ಕಡೆಗಳಿಂದ ಜನ ತಡರಾತ್ರಿಯೇ ದೇಗುಲಕ್ಕೆ ಬಂದು ಪ್ರಾಂಗಣದಲ್ಲಿ ವಾಸ್ಯವ್ಯ ಹೂಡಿದ್ದರು.

ರಥವನ್ನು ಬಣ್ಣ ಬಣ್ಣದ ಹೂ, ದೀಪಗಳಿಂದ ಅಲಂಕರಿಸಲಾಗಿತ್ತು. ಪುರವಂತರ ನೃತ್ಯ, ಮಕ್ಕಳ ಕೋಲಾಟ, ಹಳಗಿ ನೃತ್ಯ ಗಮನ ಸೆಳೆಯಿತು. ಒಂದು ವಾರ ಜಾತ್ರೆ ನಡೆಯಲಿದ್ದು, ರಾಜ್ಯ ಸೇರಿದಂತೆ ನೆರೆಯ ಮಹಾರಾಷ್ಟ್ರ, ತೆಲಂಗಾಣದಿಂದಲೂ ಅಪಾರ ಭಕ್ತರು ಭೇಟಿ ಕೊಡುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.