4

ಜಿಲ್ಲಾಧಿಕಾರಿ ಅನಿರುಧ್ಧ ಶ್ರವಣ ವರ್ಗ

Published:
Updated:
ಅನಿರುದ್ಧ ಶ್ರವಣ

ಬೀದರ್‌: 77 ದಿನಗಳ ಹಿಂದೆ ಬೀದರ್‌ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಅನಿರುದ್ಧ ಶ್ರವಣ ಅವರನ್ನು ಸರ್ಕಾರ ಮಂಗಳವಾರ ವರ್ಗಾವಣೆ ಮಾಡಿದೆ.

ಹಿಂದಿನ ಜಿಲ್ಲಾಧಿಕಾರಿ ಎಚ್‌.ಆರ್.ಮಹಾದೇವ ಮತ್ತೆ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಎರಡು ವರ್ಷ ಪೂರ್ಣಗೊಳ್ಳುವ ಮೊದಲೇ ಮಾಡಿರುವ ವರ್ಗಾವಣೆ ಆದೇಶ ರದ್ದುಪಡಿಸಬೇಕು ಎಂದು ಮಹಾದೇವ ಅವರು ಕೇಂದ್ರ ಆಡಳಿತ ನ್ಯಾಯ ಮಂಡಳಿ(ಸಿಎಟಿ) ಹಾಗೂ ಹೈಕೋರ್ಟ್‌ ಮೊರೆ ಹೋಗಿದ್ದರು.

ಮಹಾದೇವ, ಜಿಲ್ಲಾಧಿಕಾರಿ ನಿವಾಸವನ್ನೂ ಬಿಟ್ಟುಕೊಟ್ಟಿರಲಿಲ್ಲ. ಅನಿರುದ್ಧ ಶ್ರವಣ ಅವರು ಹೆಬ್ಸಿಕೋಟ್‌ ಅತಿಥಿಗೃಹದಲ್ಲೇ ವಾಸವಾಗಿದ್ದರು. ಬ್ರಿಮ್ಸ್‌ ಬೋಧಕ ಆಸ್ಪತ್ರೆಯ ಸಮಸ್ಯೆ ನಿವಾರಣೆ, ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಪ್ಲಾಸ್ಟಿಕ್‌ ಬಳಕೆ ನಿಷೇಧಕ್ಕೆ ಪಣ ತೊಟಿದ್ದರು. ಅನಿರುದ್ಧ ಅವರನ್ನು ವರ್ಗಾವಣೆ ಮಾಡದಂತೆ ಜಿಲ್ಲೆಯ ಅನೇಕ ಸಂಘಟನೆಗಳು ಸರ್ಕಾರಕ್ಕೆ ಮನವಿ ಮಾಡಿದ್ದವು. ಹೈಕೋರ್ಟ್‌ ಆದೇಶ ಪಾಲಿಸಲು ಅನಿರುದ್ಧ ಅವರನ್ನು ವರ್ಗಾವಣೆ ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !