ಬೀದರ್: ನಗರದ ಗುಂಪಾ ರಿಂಗ್ರೋಡ್ನ ಸಿದ್ದಾರೂಢ ವೃತ್ತದ ರಸ್ತೆಯಲ್ಲಿ ಬಿದ್ದಿದ್ದ ದೊಡ್ಡ ಗುಂಡಿಯನ್ನು ಕೊನೆಗೂ ಬೀದರ್ ಮಹಾನಗರ ಪಾಲಿಕೆಯ ಸಿಬ್ಬಂದಿ ಮುಚ್ಚಿದ್ದಾರೆ.

ಗುಂಡಿಯಲ್ಲಿ ಬಿದ್ದಿದ್ದ ತ್ಯಾಜ್ಯ ತೆರವುಗೊಳಿಸಿ, ಅದರ ಮೇಲೆ ಕಾಂಕ್ರೀಟ್ ಬೆಡ್ ಹಾಕಿ, ಬ್ಯಾರಿಕೇಡ್ ಹಾಕಿದ್ದಾರೆ.

ಸಿದ್ದಾರೂಢ ವೃತ್ತದಿಂದ ಹಡಪದ ಅಪ್ಪಣ್ಣ ವೃತ್ತದವರೆಗಿನ ರಸ್ತೆಯ ಒಂದು ಭಾಗ ಅತಿಕ್ರಮಣಕ್ಕೆ ಒಳಗಾಗಿದ್ದು, ರಸ್ತೆ ಕಿರಿದಾಗಿ ಅದರಿಂದ ಸಂಚಾರಕ್ಕೆ ತೊಡಕಾಗುತ್ತಿದೆ. ಜೊತೆಯಲ್ಲಿ ದೊಡ್ಡ ಗುಂಡಿ ಬಿದ್ದಿರುವುದರಿಂದ ಅನೇಕ ಅಪಘಾತಗಳಿಗೆ ಎಡೆಮಾಡಿಕೊಟ್ಟಿತ್ತು. ಗುಂಡಿ ಮುಚ್ಚಿಸುವಂತೆ ಸ್ಥಳೀಯರು ಹಲವು ಸಲ ಮನವಿ ಸಲ್ಲಿಸಿದ್ದರು. ಆದರೂ ಸ್ಪಂದನೆ ಸಿಕ್ಕಿರಲಿಲ್ಲ. ‘ರಸ್ತೆ ಮಧ್ಯದ ಗುಂಡಿ ಮುಚ್ಚಲಾಗದ ಅಸಹಾಯತೆ’ ಶೀರ್ಷಿಕೆಯಡಿ ‘ಪ್ರಜಾವಾಣಿ’ ಡಿಸೆಂಬರ್ 23ರಂದು ವರದಿ ಪ್ರಕಟಿಸಿತ್ತು. ವರದಿಗೆ ಎಚ್ಚೆತ್ತ ಪಾಲಿಕೆ ಕೊನೆಗೂ ಅದನ್ನು ಸರಿಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.