ಭಾನುವಾರ, ಡಿಸೆಂಬರ್ 15, 2019
24 °C

ಸಶಕ್ತ ಭಾರತ ನಿರ್ಮಾಣ ಕಾರ್ಯಕ್ರಮ: 10 ರಂದು ಬೈಕ್‌ ರ್‌್ಯಾಲಿಗೆ ಸ್ವಾಗತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೀದರ್: ಸಶಕ್ತ ಭಾರತ ನಿರ್ಮಾಣ ಕಾರ್ಯಕ್ರಮದ ಅಂಗವಾಗಿ ಪುಣೆಯಿಂದ ಹೊರಟಿರುವ ಬೈಕ್‌ ರ್‌್ಯಾಲಿ ಡಿ.10ರಂದು ಬೆಳಿಗ್ಗೆ 7 ಗಂಟೆಗೆ ಔರಾದ್‌ ತಾಲ್ಲೂಕಿನ ವನಮಾರಪಳ್ಳಿಗೆ ಆಗಮಿಸಲಿದೆ ಎಂದು ಕರ್ನಾಟಕ ಮರಾಠಾ ಸೇವಾ ಸಂಘದ ಅಧ್ಯಕ್ಷ ಬಾಲಾಜಿ ಕಣಜಿಕರ್‌ ತಿಳಿಸಿದ್ದಾರೆ.

ಮೊಘಲ್‌ ಸಾಮ್ರಾಟ ಔರಂಗಜೇಬನು ಛತ್ರಪತಿ ಶಿವಾಜಿ ಮಹಾರಾಜ್‌ ಅವರನ್ನು ಆಗ್ರಾದ ಕೋಟೆಯಲ್ಲಿ ಬಂಧಿಸಿ ಇಟ್ಟಿದ್ದ. ಶಿವಾಜಿ, ಔರಂಗಜೇಬನ ಸೈನಿಕರ ಕಣ್ಣು ತಪ್ಪಿಸಿ ಹರಿಯಾಣಕ್ಕೆ ಹೋಗಿದ್ದರು. ಅಲ್ಲಿಂದ ಉತ್ತರಪ್ರದೇಶ, ಪಟ್ನಾ, ಒಡಿಶಾದ ಮೂಲಕ ವನಮಾರಪಳ್ಳಿಗೆ ಬಂದು ಹುಮನಾಬಾದ್, ಬಸವಕಲ್ಯಾಣ ಮಾರ್ಗವಾಗಿ ಪುಣೆಗೆ ತೆರಳಿದ್ದರು.

ಮೊಘಲ್‌ರ ಬಂಧಿಖಾನೆಯಿಂದ ಬಿಡುಗಡೆಯಾದ ಸ್ಮರಣಾರ್ಥ 100 ಬೈಕ್‌ ಸವಾರರು ಪ್ರಯಾಣ ಆರಂಭಿಸಿದ್ದು, ಈಗಾಗಲೇ 1,700 ಕಿ.ಮೀ ಕ್ರಮಿಸಿದ್ದಾರೆ. ಬೈಕ್‌ ರ್‌್ಯಾಲಿ ಔರಾದ್‌ನಿಂದ ಬೀದರ್‌ಗೆ ಬರಲಿದ್ದು, ಸಿದ್ಧಾರ್ಥ ಕಾಲೇಜಿನ ಬಳಿ ಭವ್ಯ ಸ್ವಾಗತ ನೀಡಲಾಗುವುದು. ಬೈಕ್‌ ಸವಾರರನ್ನು ನಗರದಲ್ಲಿ ಮೆರವಣಿಗೆ ಮೂಲಕ ರಂಗ ಮಂದಿರಕ್ಕೆ ಕರೆ ತರಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)