ಭಾನುವಾರ, ಸೆಪ್ಟೆಂಬರ್ 19, 2021
24 °C

ಭಾರತೀಯ ಭೀಮ ಸೇನೆಯಲ್ಲಿ ರಾಜ್ಯ ದಲಿತ ಏಕಿಕರಣ ಸಮಿತಿ ವಿಲೀನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಲೀನ ಕಾರ್ಯಕ್ರಮ
ಬೀದರ್‌: ಭಾರತೀಯ ಭೀಮ ಸೇನೆಯಲ್ಲಿ ರಾಜ್ಯ ದಲಿತ ಏಕಿಕರಣ ಸಮಿತಿ ವಿಲೀನ ಕಾರ್ಯಕ್ರಮ ನಗರದ ಬಿ.ಶಾಮಸುಂದರ ಭವನದಲ್ಲಿ ಈಚೆಗೆ ನಡೆಯಿತು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ವಿಠಲದಾಸ ಪ್ಯಾಗೆ ಕಾರ್ಯಕ್ರಮ ಉದ್ಘಾಟಿಸಿದರು. ಹೈಕೋರ್ಟ್ ವಕೀಲ ಸೈಯದ್ ತಲಾಹಾಶ್ಮಿ, ಸುಮಂತ ಕಟ್ಟಿಮನಿ, ಸೈಯದ್‌ ಸರ್ಫರಾಜ್ ಹಾಶ್ಮಿ, ಸುನೀಲಕುಮಾರ ಡೊಳ್ಳೆ, ಗಣಪತಿ ಭಕ್ತಾ ಮಾತನಾಡಿದರು.
ಸುರೇಶ ಶಿಂಧೆ, ಪಂಡರಿ ವರ್ಮಾ, ಮಹಾದೇವ ಕಾಂಬಳೆ, ಸುರೇಶ ಟಾಳೆ ಇದ್ದರು. ಬಕ್ಕಪ್ಪ ದಂಡಿನ್ ಸ್ವಾಗತಿಸಿದರು.
ಕಿಶೋರಕುಮಾರ ನವಲಸಪೂರಕರ್ ನಿರೂಪಿಸಿದರು.
* * *
ಬಿಜೆಪಿ ಕಾರ್ಯಕಾರಣಿ ಸಭೆ
ಬೀದರ್‌: ಬಿಜೆಪಿ ನಗರ ಘಟಕದ ಕಾರ್ಯಕಾರಣಿ ಸಭೆ ಪಕ್ಷದ ಕಾರ್ಯಾಲಯದಲ್ಲಿ ಈಚೆಗೆ ನಡೆಯಿತು.
ಹಿರಿಯ ಮುಖಂಡ ಈಶ್ವರಸಿಂಗ್‌ ಠಾಕೂರ್, ಎಸ್‌.ಟಿ ಮೋರ್ಚಾದ ಅಧ್ಯಕ್ಷ ಮಹೇಶ ಪಾಲಮ್ ಮಾತನಾಡಿದರು.
ಬೀದರ್ ನಗರ ಘಟಕದ ಅಧ್ಯಕ್ಷ ಹಣಮಂತರಾವ್ ಬುಳ್ಳಾ, ಎಸ್.ಟಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ರಾಜಕುಮಾರ ಜಮಾದಾರ್, ರವೀಂದ್ರ ಬಾಳೆಬಾಯಿ, ಅನಿಲ ರಾಜಗೀರಾ, ಸುನೀಲ ಗೌಳಿ, ಅವಿನಾಶ ಬರಿದಾಬಾದೆ, ಕಿಶನ್ ಜಮಾದಾರ ಪಾಲ್ಗೊಂಡಿದ್ದರು.
* * *

ಮನೆ, ಮನಗಳಲ್ಲಿ ಬಸವಜ್ಯೋತಿ ಸಮಾರೋಪ ಇಂದು
ಬೀದರ್: ರಾಷ್ಟ್ರೀಯ ಬಸವ ದಳ, ಲಿಂಗಾಯತ ಸಮಾಜ ಜಿಲ್ಲಾ ಘಟಕ ಹಾಗೂ ಕ್ರಾಂತಿ ಗಂಗೋತ್ರಿ ಅಕ್ಕ ನಾಗಲಾಂಬಿಕೆ ಮಹಿಳಾ ಗಣದ ವತಿಯಿಂದ ಶ್ರಾವಣ ಪ್ರಯುಕ್ತ ಒಂದು ತಿಂಗಳ ಕಾಲ ಹಮ್ಮಿಕೊಂಡಿದ್ದ ಮನೆ, ಮನಗಳಲ್ಲಿ ಬಸವ ಜ್ಯೋತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಸೆ. 12 ರಂದು ಬೆಳಿಗ್ಗೆ 11ಕ್ಕೆ ನಗರದ ಬಸವ ಮಂಟಪದಲ್ಲಿ ನಡೆಯಲಿದೆ.
ಮಾತೆ ಸತ್ಯದೇವಿ ಸಾನಿಧ್ಯ ವಹಿಸುವರು. ರಾಷ್ಟ್ರೀಯ ಬಸವ ದಳದ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ ಅಧ್ಯಕ್ಷತೆ ವಹಿಸುವರು.
ಕಾರ್ಯಕ್ರಮದಲ್ಲಿ ಬಸವ ಭಕ್ತರು, ಬಸವಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ರಾಷ್ಟ್ರೀಯ ಬಸವ ದಳದ ಬೀದರ್ ದಕ್ಷಿಣ ಘಟಕದ ಉಸ್ತುವಾರಿ ಮಹಾಲಿಂಗ ಸ್ವಾಮಿ ಚಟ್ನಳ್ಳಿ ಮನವಿ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.