ಸೋಮವಾರ, ಜನವರಿ 20, 2020
17 °C
ನಿರಂತರ ಸೇವಾ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸೊಸೈಟಿ ಸಹಯೋಗದಲ್ಲಿ ಶಿಬಿರ

‘ರಕ್ತದಾನ ಮಾಡಿ ಜೀವ ಉಳಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಮಲನಗರ: ‘ರಕ್ತ ದಾನದ ಮಹತ್ವದ ಕುರಿತು ತಿಳಿವಳಿಕೆ ಮೂಡಿಸುವುದು ಅಗತ್ಯ’ ಎಂದು ಆಡಳಿತ ವೈದ್ಯಾಧಿಕಾರಿ ಡಾ.ಅನೀಲಕುಮಾರ ರಾಯಪಳ್ಳಿ ಅಭಿಪ್ರಾಯಪಟ್ಟರು.

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶನಿವಾರ ನಿರಂತರ ಸೇವಾ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸೊಸೈಟಿ ಮತ್ತು ಶಾಂತಿವರ್ಧಕ ಪಿಯು ಕಾಲೇಜಿನ ಎನ್‍ಎಸ್‍ಎಸ್ ಶಿಬಿರಾರ್ಥಿಗಳ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ರಕ್ತದಾನ ಶಿಬಿರವನ್ನು ಅವರು ಉದ್ಗಾಟಿಸಿ ಮಾತನಾಡಿದರು.

ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ರಕ್ತದಾನ ಶಿಬಿರಗಳನ್ನು ಹೆಚ್ಚಾಗಿ ಆಯೋಜಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ರಕ್ತದಾನದ ಮೂಲಕ ಜೀವರಕ್ಷಣೆ ಸಾಧ್ಯ ಎಂಬುದನ್ನು ಎಲ್ಲರೂ ಅರಿಯಬೇಕು. ರಕ್ತ ದಾನ ಮಾಡುವುದು ಪುಣ್ಯದ ಕೆಲಸವಾಗಿದ್ದು, ಯುವಕರು ರಕ್ತ ಕೂಡುವುದರಿಂದ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತದೆ ಮತ್ತು ಉತ್ಸಾಹಿಗಳಾಗಲು ಸಾಧ್ಯವಾಗುತ್ತದೆ ಎಂದರು.

ನಿರಂತರ ಸೇವಾ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸೊಸೈಟಿ ಅಧ್ಯಕ್ಷ ರಾಜಶೇಖರ ಅಜ್ಜ ಮಾತನಾಡಿ,‘ಅಪಘಾತದ ಸಂದರ್ಭಗಳಲ್ಲಿ ರಕ್ತ ಜೀವ ಉಳಿಸುತ್ತದೆ. ಇದನ್ನು ಅರಿತು ಸಮಾಜದ ಆರೋಗ್ಯವಂತರು ರಕ್ತದಾನ ಮಾಡುವ ಮೂಲಕ ಮಾದರಿಯಾಗಬೇಕು’ ಎಂದರು.

ನಿರಂತರ ಸೇವಾ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸೊಸೈಟಿ ಉಪಾಧ್ಯಕ್ಷ ಸೋಮಯ್ಯ ಹಿರೇಮಠ, ಓಂಕಾರ ಸೋಲ್ಲಪುರೆ, ಗ್ರಾಪಂ ಉಪಾಧ್ಯಕ್ಷ ಸಂತೋಷ ಬಿರಾದಾರ, ಆಕಾಶ ಜಾಧವ, ಲ್ಯಾಬ್ ಟೆಕೆನ್ಸಿಯನ್ ವಿಕ್ರಮ, ಕೌನ್ಸಲರ್‌ ತುಳಸಮ್ಮ ರೆಡ್ಡಿ, ಬ್ರಿಮ್ಸ್‌ ಸಿಬ್ಬಂದಿ ಆರೀಫ್, ಗೋರಖನಾಥ, ಮಹೇಶನಾಥ, ಔರಾದ್ ಮುಜಿಬುದ್ದೀನ್, ಆರೋಗ್ಯ ಸಹಾಯಕರಾದ ಅನೀತಾ ಸಿಂಧೆ, ಸವಿತಾ ಹೂಗಾರ, ವೈಜನಾಥ ವಡ್ಡೆ, ಎನ್‍ಎಸ್‍ಎಸ್ ಯೋಜನಾಧಿಕಾರಿ ಶಿವರುದ್ರಯ್ಯ ಸ್ವಾಮಿ, ಓಂಕಾರ ಸೂರ್ಯವಂಶಿ, ಸಿದ್ರಾಮ ರಾಂಪುರೆ, ಶಾಂತಕುಮಾರ ಬಿರಾದಾರ, ಬಾನಾ ಸೋಲ್ಲಪುರೆ, ವಿಕ್ರಮ ಎಖ್ಖೇಳಿಕರ್, ನರಸಿಂಗ್ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.

ಉಚಿತ ಶಿಬಿರದಲ್ಲಿ ರಕ್ತದಾನ ಮಾಡಿದವರಿಗೆ ಹಣ್ಣಿನ ರಸ ಮತ್ತು ಬಾಳೆ ಹಣ್ಣು ಹಾಗೂ ಪ್ರಮಾಣಪತ್ರ ನೀಡಲಾಯಿತು.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು