ಬೀದರ್: ನಗರದ ಬೀದರ್ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಬ್ರಿಮ್ಸ್) ಬೈಲಹೊಂಗಲದ ಡಾ. ಮಹಾಂತೇಶ ರಾಮಣ್ಣನವರ ಚಾರಿಟಬಲ್ ಟ್ರಸ್ಟ್ನಿಂದ ಗುರುವಾರ ಎರಡು ಮೃತದೇಹಗಳನ್ನು ದಾನ ಮಾಡಲಾಯಿತು.

ಮೆಡಿಕಲ್ ಕಾಲೇಜಿನ ಪ್ರಥಮ ವರ್ಷದ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ ಈ ಮೃತದೇಹಗಳನ್ನು ನೀಡಲಾಗಿದೆ. ಹುಬ್ಬಳ್ಳಿಯ ಸೋಮಶೇಖರ ಹಿರೇಮಠ (59), ಬೆಳಗಾವಿಯ ಮಹಾದೇವಿ ಪಾಟೀಲ್ (56) ಅವರ ಮೃತದೇಹಗಳನ್ನು ಟ್ರಸ್ಟ್ನಿಂದ ಬ್ರಿಮ್ಸ್ಗೆ ಹಸ್ತಾಂತರಿಸಿ, ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಕಾರ್ಯಕ್ರಮವದಲ್ಲಿ ಮಾತನಾಡಿದ ಡಾ. ಮಹಾಂತೇಶ ರಾಮಣ್ಣನವರ, ಜೀವ ಇರುವಾಗ ರಕ್ತದಾನ, ಜೀವ ಹೋಗುವಾಗ ಅಂಗದಾನ, ಚರ್ಮದಾನ, ನೇತ್ರದಾನ ಹಾಗೂ ದೇಹದಾನ ಮಾಡಬೇಕು. ಇವುಗಳೆಲ್ಲ ಮಾನವೀಯ ಸೇವೆಯ ನಿಜವಾದ ರೂಪ ಎಂದು ಹೇಳಿದರು. ಬಳಿಕ ವಿದ್ಯಾರ್ಥಿಗಳಿಗೆ ದೇಹದಾನದ ವೈಜ್ಞಾನಿಕ ಹಾಗೂ ನೈತಿಕ ಮಹತ್ವದ ವಿವರಿಸಿದರು.

ಬ್ರಿಮ್ಸ್ ನಿರ್ದೇಶಕ ಶಿವಕುಮಾರ ಶೆಟಕಾರ್, ಪ್ರಾಂಶುಪಾಲ ಡಾ. ರಾಜೇಶ್ ಪಾರಾ, ಹಣಕಾಸು ಅಧಿಕಾರಿ ಶ್ರೀಕಾಂತ ವ್ಯೆರಾಗೆ, ಅಂಗರಚನಾಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಸಂದೀಪ ದೇಶಮುಖ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.