ಭಾನುವಾರ, ಜೂಲೈ 5, 2020
27 °C

ಸಿಡಿಲು ಬಡಿದು ಯುವಕ, 15 ಆಡುಗಳ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಜಿಲ್ಲೆಯ ಕಮಲನಗರ, ಔರಾದ್ ಹಾಗೂ ಭಾಲ್ಕಿಯಲ್ಲಿ ಶುಕ್ರವಾರ ಸಾಧಾರಣ ಮಳೆಯಾಗಿದೆ. ಸಿಡಿಲು ಬಡಿದು ಔರಾದ್ ತಾಲ್ಲೂಕಿನಲ್ಲಿ ಯುವಕ ಹಾಗೂ ಠಾಣಾಕುಶನೂರಲ್ಲಿ 15 ಆಡುಗಳು ಮೃತಪಟ್ಟಿವೆ.

ಔರಾದ್ ತಾಲ್ಲೂಕಿನ ಹಿಪ್ಪಳಗಾಂವ ಗ್ರಾಮದಲ್ಲಿ ಮಾರುತಿ ಅಶೋಕ ಸಿಂಗೋಡೆ (28) ಹೊಲದಲ್ಲಿ ಸಿಡಿಲು ಬಡಿದು ಸಾವಿಗೀಡಾಗಿದ್ದಾರೆ. ಠಾಣಾಕುಶನೂರ ಸಮೀಪದ ಪ್ರವಾಸಿ ಮಂದಿರ ಹತ್ತಿರದ ತಾಂಡಾದಲ್ಲಿ ಪ್ರತಾಪ ಆಡೆ ಅವರ 15 ಆಡುಗಳು ಮೃತಪಟ್ಟಿವೆ. ಠಾಣಾಕುಶನೂರ ಪಿಎಸ್ಐ ವಿ.ಬಿ ಯಾದವಾಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಭಾಲ್ಕಿ ತಾಲ್ಲೂಕಿನ ಕೋನಮೆಳಕುಂದಾ ಗ್ರಾಮದಲ್ಲಿ ಜೋರಾಗಿ ಬೀಸಿದ ಗಾಳಿಗೆ ಮರವೊಂದು ಉರುಳಿದೆ. ಯಾವುದೇ ಜೀವ ಹಾನಿಯಾಗಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.