ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲಂಚ; ಪಿಡಿಒ, ತಾಂತ್ರಿಕ ಸಹಾಯಕನ ಬಂಧನ

Published : 10 ಸೆಪ್ಟೆಂಬರ್ 2024, 12:37 IST
Last Updated : 10 ಸೆಪ್ಟೆಂಬರ್ 2024, 12:37 IST
ಫಾಲೋ ಮಾಡಿ
Comments

ಭಾಲ್ಕಿ/ಬೀದರ್‌: ನರೇಗಾ ಯೋಜನೆಯಡಿ ನಿರ್ವಹಿಸಿದ ಕಾಮಗಾರಿಯ ಬಿಲ್ ಪಾವತಿಗೆ ಲಂಚಕ್ಕೆ ಬೇಡಿಕೆಯಿಟ್ಟು, ನಗದು ತೆಗೆದುಕೊಳ್ಳುತ್ತಿದ್ದ ಭಾಲ್ಕಿ ತಾಲ್ಲೂಕಿನ ಕೋಸಂ ಗ್ರಾಮ ಪಂಚಾಯಿತಿ ಪಿಡಿಒ ರಾಹುಲ್ ದಾಂಡೆ, ತಾಂತ್ರಿಕ ಸಹಾಯಕ ಸಿದ್ರಾಮೇಶ್ವರ ಪಾಟೀಲ ಎಂಬುವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಪಿಡಿಒ ರಾಹುಲ್‌ ಅವರು ದೂರುದಾರರಿಂದ ₹30 ಸಾವಿರ, ತಾಂತ್ರಿಕ ಸಹಾಯಕ ಸಿದ್ರಾಮೇಶ್ವರ ಪಾಟೀಲ ಅವರು ದೂರುದಾರರಿಂದ ₹70 ಸಾವಿರ ನಗದು ಪಡೆಯುವಾಗ ಸಿಕ್ಕಿ ಬಿದ್ದಿದ್ದಾರೆ. ಈ ಎರಡೂ ಪ್ರಕರಣಗಳಲ್ಲಿ ಪ್ರತ್ಯೇಕ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು ಇಬ್ಬರನ್ನು ಸೋಮವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಭಾಲ್ಕಿ ತಾಲ್ಲೂಕಿನ ಹಾಲಹಿಪ್ಪರ್ಗಾದ ಗುತ್ತಿಗೆದಾರ ಅರವಿಂದ ಮಾಧವರಾವ ಭಾಲ್ಕೆ ಅವರು ನರೇಗಾ ಯೋಜನೆಯಡಿ 15 ಕಾಮಗಾರಿಗಳನ್ನು ನಿರ್ವಹಿಸಿದ್ದರು. ಬಿಲ್ ಪಾವತಿಗೆ ಪಿಡಿಒ, ತಾಂತ್ರಿಕ ಸಹಾಯಕ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಈ ಕುರಿತು ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಸೋಮವಾರ ಬೀದರ್ ನಗರದ ಗುಂಪಾ ಸಮೀಪದ ಕಾರ್ ಸರ್ವೀಸ್ ಸೆಂಟರ್ ಬಳಿ ಪಿಡಿಒ ರಾಹುಲ್ ದೂರುದಾರ ಅರವಿಂದ ಅವರಿಂದ ₹30 ಸಾವಿರ ನಗದು ಹಾಗೂ ಭಾಲ್ಕಿ ತಾಲ್ಲೂಕಿನ ಹಲಬರ್ಗಾದ ಬಸ್‌ ನಿಲ್ದಾಣದ ಬಳಿ ₹70 ಸಾವಿರ ಲಂಚ ತೆಗೆದುಕೊಳ್ಳುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ನಗದಿನೊಂದಿಗೆ ಬಂಧಿಸಿದ್ದಾರೆ.

ಈ ಸಂಬಂಧ ಬೀದರ್ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ಹಣಮಂತರಾವ್, ಪಿಎಸ್ಐಗಳಾದ

ಬಾಬಾಸಾಹೇಬ್ ಪಾಟೀಲ, ಸಂತೋಷ ರಾಠೋಡ್, ಅರ್ಜುನಪ್ಪ, ಉದ್ದಂಡಪ್ಪ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT