ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ವೈಗೆ ಶರಣಭೂಮಿ ವಿಕಾಸದ ಕಾಳಜಿ: ಶರಣು ಸಲಗರ ಹೇಳಿಕೆ

ಪ್ರಚಾರ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಹೇಳಿಕೆ
Last Updated 7 ಏಪ್ರಿಲ್ 2021, 4:59 IST
ಅಕ್ಷರ ಗಾತ್ರ

ಹಣಮಂತವಾಡಿ (ಬಸವಕಲ್ಯಾಣ): ‘12ನೇ ಶತಮಾನದಲ್ಲಿ ಸಮಾನತೆ ಸಾರಿದ ಬಸವಾದಿ ಶರಣರ ಕಾರ್ಯಕ್ಷೇತ್ರದ ವಿಕಾಸದ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಸಾಕಷ್ಟು ಕಾಳಜಿ ಹೊಂದಿದ್ದಾರೆ’ ಎಂದು ಈ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಹೇಳಿದರು.

ಈ ವಿಧಾನಸಭಾ ಕ್ಷೇತ್ರದ ಹಣಮಂತವಾಡಿ ಗ್ರಾಮದಲ್ಲಿ ಮಂಗಳವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಅವರು ಮುಖ್ಯಮಂತ್ರಿ ಆಗಿದ್ದಾಗಲೇ ಈ ಕ್ಷೇತ್ರದ ಅಭಿವೃದ್ಧಿಗೆ ನೂರಾರು ಕೋಟಿ ಅನುದಾನ ಒದಗಿಸಿದ್ದಾರೆ. ಅನುಭವ ಮಂಟಪಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಇನ್ನು ಮುಂದೆಯೂ ಅವರು ಹೆಚ್ಚಿನ ಅನುದಾನ ನೀಡುವರು ಎಂಬ ಭರವಸೆ ಇದೆ. ಆದ್ದರಿಂದ ಬಿಜೆಪಿ ಚಿಹ್ನೆಗೆ ಮತ ಚಲಾಯಿಸಬೇಕು’ ಎಂದು ಕೇಳಿಕೊಂಡರು.

‘ನಾನು ಕೊರೊನಾ ಲಾಕ್‌ಡೌನ್ ಕಾಲದಲ್ಲಿ ಕೈಲಾದಷ್ಟು ಸಹಾಯ ಮಾಡಿದ್ದೇನೆ. ಬಡವರಿಗೆ, ನಿರ್ಗತಿಕರಿಗೆ ಆಹಾರಧಾನ್ಯ ವಿತರಿಸಿದ್ದೇನೆ. ನನ್ನ ಸೇವೆ ಗುರುತಿಸಿ ನನಗೆ ಮತ ನೀಡಿರಿ. ಇದಲ್ಲದೆ ಮುಂದೆಯೂ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಕನಸಿದೆ. ನನ್ನನ್ನು ಗೆಲ್ಲಿಸಿದರೆ ಆ ಕನಸು ನನಸಾಗುತ್ತದೆ’ ಎಂದರು.

ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ ವಕಾರೆ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸಿದ್ರಾಮ ಕಾಮಣ್ಣ, ಲತಾ ಹಾರಕೂಡೆ, ಅರವಿಂದ ಹರಪಲ್ಲೆ, ದೇವೇಂದ್ರ ಭೋಪಳೆ, ಪ್ರಕಾಶ ಬಿರಾದಾರ, ಪಂಕಜ್ ಸೂರ್ಯವಂಶಿ, ಶಂಭು ಗುಗಳೆ, ಸಂಗಮೇಶ ಭೋಪಳೆ, ರಾಜಕುಮಾರ ಹಲಿಂಗೆ, ಶಾಂತಕುಮಾರ, ಸುಭಾಷ ಕಾಡಾದಿ, ಚಂದ್ರಕಾಂತ ದೇಟ್ನೆ, ಜ್ಞಾನೋಬಾ ನಿಟ್ಟೂರೆ, ಶರದ್ ಶಿಂಧೆ, ಶಿವಾಜಿ ಪಾಟೀಲ, ತುಕಾರಾಮ ಜಾಧವ ಪಾಲ್ಗೊಂಡಿದ್ದರು.

ಗೌರ ತಾಂಡಾ, ಅಂಬೇವಾಡಿ, ಆನಂದವಾಡಿ, ಕೋಟಮಾಳ, ಮಿರಕಲ್, ಗುತ್ತಿ, ವಾಂಜರವಾಡಿ ಗ್ರಾಮಗಳಲ್ಲಿಯೂ ಪ್ರಚಾರ ಸಭೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT