ಶನಿವಾರ, ಸೆಪ್ಟೆಂಬರ್ 25, 2021
28 °C

ದತ್ತಗಿರಿ ಶಾಲೆಗೆ ಶೇ 100 ರಷ್ಟು ಫಲಿತಾಂಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಪ್ರಸಕ್ತ ಸಾಲಿನ ಸಿಬಿಎಸ್‍ಇ 10ನೇ ತರಗತಿ ಪರೀಕ್ಷೆಯಲ್ಲಿ ಇಲ್ಲಿಯ ದತ್ತಗಿರಿ ಮಹಾರಾಜ್ ಆಂಗ್ಲಮಾಧ್ಯಮ ಪಬ್ಲಿಕ್ ಶಾಲೆಗೆ ಶೇ 100ಕ್ಕೆ 100 ರಷ್ಟು ಫಲಿತಾಂಶ ಲಭಿಸಿದೆ.

ಪರೀಕ್ಷೆ ಬರೆದ ಎಲ್ಲ 85 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಮೂವರು ಶೇ 90 ಮೇಲ್ಪಟ್ಟು, 17 ಜನ ಶೇ 80 ಮೇಲ್ಪಟ್ಟು ಹಾಗೂ 27 ಜನ ಶೇ 70 ಮೇಲ್ಪಟ್ಟು ಅಂಕ
ಗಳಿಸಿ ಸಾಧನೆಗೈದಿದ್ದಾರೆ.

ಪ್ರಗತಿ ಶೇ 95, ಅಭಿಷೇಕ ಶೇ 91.6, ದಿನೇಶ ಶೇ 91, ಸಂಕೇತ್ ಶೇ 88.8, ಪ್ರೀತಿ ಶೇ 88.4 ರಷ್ಟು ಅಂಕ ಪಡೆದಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ದತ್ತಗಿರಿ ಮಹಾರಾಜ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಅವಧೂತಗಿರಿ ಮಹಾರಾಜ್ ಹಾಗೂ ಪ್ರಾಚಾರ್ಯೆ ಮಹಾದೇವಿ ಬೀದೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.