ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಟಗುಪ್ಪ: ಅಕ್ರಮ ಧಾನ್ಯ ದಾಸ್ತಾನು, ದೂರು ದಾಖಲು

Last Updated 29 ಸೆಪ್ಟೆಂಬರ್ 2018, 12:44 IST
ಅಕ್ಷರ ಗಾತ್ರ

ಚಿಟಗುಪ್ಪ: ಪಡಿತರ ಅಕ್ಕಿ, ಗೋಧಿ, ಹಾಲಿನ ಪುಡಿ ಅಕ್ರಮ ದಾಸ್ತಾನು ಮತ್ತು ಸಾಗಣೆ ಆರೋಪದ ಮೇರೆಗೆ ಪಟ್ಟಣದ ಕೃಷಿ ಉಪ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿಯ ಅಕ್ಕಿ ವ್ಯಾಪಾರಿ ಮಧುಕರ ವೀರಶೆಟ್ಟಿ ಬಗ್ದಲಕರ್ ಎಂಬುವರ ವಿರುದ್ಧ ತಾಲ್ಲೂಕು ಆಹಾರ ನಿರೀಕ್ಷಕಿ ನೀಲಮ್ಮ ಪಟ್ಟಣದ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಉಗ್ರಾಣದ ಮೇಲೆ ಶನಿವಾರ ತಹಶೀಲ್ದಾರ ಡಾ.ನಾಗರಾಜ್ ಎಲ್ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ಮಾಡಿದರು. ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ 298 ಅಕ್ಕಿ ಚೀಲಗಳು, 211 ಗೋಧಿ ಚೀಲಗಳು, ಅನ್ನ ಭಾಗ್ಯದ 13 ತೊಗರಿ ಚೀಲಗಳು ಮತ್ತು ಕ್ಷೀರ ಭಾಗ್ಯ ಯೋಜನೆಯಡಿ ಸರಬರಾಜು ಮಾಡುವ ಹಾಲಿನ ಪೌಡರ್ ತುಂಬಿದ ಪ್ಯಾಕೆಟ್‌ಗಳ 8 ಚೀಲಗಳನ್ನು ವಶಕ್ಕೆ ಪಡೆದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರು ಇದ್ದರು. ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮಹಾಂತೇಶ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT