ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಿ ಸಮಾಜ ಒಗ್ಗೂಡಿಸಿದ ಹೇರೂರ್

ಏಳನೇ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಜಮಾದಾರ್ ಅಭಿಮತ
Last Updated 4 ಡಿಸೆಂಬರ್ 2020, 12:36 IST
ಅಕ್ಷರ ಗಾತ್ರ

ಬೀದರ್: ದಿ. ವಿಠ್ಠಲ ಹೇರೂರ್ ಅವರು ರಾಜ್ಯದಲ್ಲಿ ಹಂಚಿ ಹೋಗಿದ್ದ ಟೋಕರೆ ಕೋಲಿ, ಕಬ್ಬಲಿಗ ಸಮಾಜವನ್ನು ಒಗ್ಗೂಡಿಸಿ ಮುಖ್ಯವಾಹಿನಿಗೆ ತಂದಿದ್ದರು ಎಂದು ಜಿಲ್ಲಾ ಟೋಕರೆ ಕೋಲಿ ಸಮಾಜ ಸಂಘದ ಅಧ್ಯಕ್ಷ ಜಗನ್ನಾಥ ಜಮಾದಾರ್ ಹೇಳಿದರು.

ಜಿಲ್ಲಾ ಟೋಕರೆ ಕೋಲಿ ಸಮಾಜ ಸಂಘ ಹಾಗೂ ಅಂಬಿಗರ ಚೌಡಯ್ಯ ಯುವ ಸೇನೆ ವತಿಯಿಂದ ನಗರದ ನೌಬಾದ್ ಬಳಿಯ ಜಿಲ್ಲಾ ಟೋಕರೆ ಕೋಲಿ ಸಮಾಜ ಸಂಘದ ಕಚೇರಿಯಲ್ಲಿ ಗುರುವಾರ ನಡೆದ ವಿಠ್ಠಲ ಹೇರೂರ್ ಅವರ ಏಳನೇ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

39 ಪರ್ಯಾಯ ಪದಗಳಿಂದ ಕರೆಯಲಾಗುವ ರಾಜ್ಯದಲ್ಲಿ ಇರುವ ಸುಮಾರು 60 ಲಕ್ಷ ಟೋಕರೆ ಕೋಲಿ ಸಮಾಜದ ಜನರನ್ನು ಒಂದುಗೂಡಿಸಿ, ಸಮಾಜದ ಸಂಘಟನೆ ಬಲಪಡಿಸಿದ್ದರು ಎಂದು ಸ್ಮರಿಸಿದರು.

ಹೇರೂರ್ ಅವರು ನಮ್ಮೊಂದಿಗೆ ಇಲ್ಲದಿದ್ದರೂ, ಅವರ ಆದರ್ಶಗಳು ಸದಾ ಜೀವಂತವಾಗಿರಲಿವೆ ಎಂದು ತಿಳಿಸಿದರು.

ಅಂಬಿಗರ ಚೌಡಯ್ಯ ಯುವ ಸೇನೆಯ ಸಂಸ್ಥಾಪಕ ಅಧ್ಯಕ್ಷ ಸುನೀಲ ಭಾವಿಕಟ್ಟಿ, ಉಪಾಧ್ಯಕ್ಷ ಮಾರುತಿ ಮಾಸ್ಟರ್, ಮುಖಂಡರಾದ ನಂದಕುಮಾರ ಜಮಗಿಕರ್ ಮಾತನಾಡಿದರು.

ಶರಣಪ್ಪ ಕಾಶೆಂಪೂರ್, ರವೀಂದ್ರ ಗುಮ್ಮಾಸ್ತಿ, ಸೂರ್ಯಕಾಂತ ಸಿರ್ಸಿ, ತುಕಾರಾಮ, ಸುರೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT