ಶುಕ್ರವಾರ, ಜನವರಿ 24, 2020
17 °C

ಸಮಿತಿಗೆ ಅವಿರೋಧ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾಲ್ಕಿ: ಪಟ್ಟಣದ ಪುರಸಭೆ ಬೀದಿಬದಿ ವ್ಯಾಪಾರಿಗಳ ವ್ಯಾಪಾರ ಸಮಿತಿಯ 10 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದರು.

‘ನಾಮಪತ್ರ ವಾಪಾಸ್‌ ಪಡೆಯಲು ಡಿ.15 ಕೊನೆ ದಿನವಾಗಿತ್ತು. ನಿಗದಿಪಡಿಸಿದ ಮೀಸಲಾತಿ ಸ್ಥಾನಗಳಿಗೆ ತಲಾ ಒಂದೊಂದೇ ನಾಮಪತ್ರ ಸಲ್ಲಿಕೆಯಾಗಿತ್ತು. 10 ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು’ ಎಂದು ಚುನಾವಣಾಧಿಕಾರಿ ಶಿವಕುಮಾರ ತಿಳಿಸಿದ್ದಾರೆ.

ಆಯ್ಕೆಯಾದ ಅಭ್ಯರ್ಥಿಗಳ ವಿವರ: ಭಾಟ್ ನಗರ ಬಡಾವಣೆಯ ಉಮೇಶ ವೀರಣ್ಣ (ಹಿಂದುಳಿದ ವರ್ಗ), ಭೀಮನಗರ ಬಡಾವಣೆಯ ಗೋದಾವರಿ ಕಾಶಿನಾಥ (ಮಹಿಳೆ), ಲಾಧಾ ಗಲ್ಲಿಯ ತಾನಾಜಿ ಬಾಬುರಾವ್ (ಸಾಮಾನ್ಯ), ದೇಶಮುಖ ಬಡಾವಣೆಯ ದಿಲೀಪಕುಮಾರ ರಾಮಶೆಟ್ಟಿ (ಸಾಮಾನ್ಯ), ಕಾಟಿಬೇಸ್ ಬಡಾವಣೆಯ ಫಯಾಜೋದ್ದಿನ್ ಮಸ್ತಾನ್ ಸಾಬ್ (ಅಲ್ಪಸಂಖ್ಯಾತ), ಹಳೆ ಪಟ್ಟಣದ ಮಾಣೇಮ್ಮ ಗಂಗಾರಾಮ (ಮಹಿಳೆ), ಧನಗಾರ ಬಡಾವಣೆ ನಿವಾಸಿ ರಘುನಾಥ ಮಾದಪ್ಪ(ಪರಿಶಿಷ್ಟ ಪಂಗಡ), ವಿ.ಎಂ.ಕಾಲೊನಿಯ ಮಿಲೀಂದ ಪ್ರಕಾಶ (ವಿಕಲ ಚೇತನ), ಭೀಮನಗರ ಬಡಾವಣೆಯ ನಿವಾಸಿ ಶ್ರಾವಣ ಬಾಬುರಾವ್ (ಪರಿಶಿಷ್ಟ ಜಾತಿ) ಮತ್ತು ಜನತಾ ಕಾಲೊನಿಯ ನಿವಾಸಿ ಸುಮನ ರೋಹಿದಾಸ (ಮಹಿಳೆ).

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು