ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌: 15 ಪರೀಕ್ಷಾ ಕೇಂದ್ರಗಳಲ್ಲಿ ಬಿಗಿ ಭದ್ರತೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ

Published : 19 ನವೆಂಬರ್ 2023, 14:17 IST
Last Updated : 19 ನವೆಂಬರ್ 2023, 14:17 IST
ಫಾಲೋ ಮಾಡಿ
Comments

ಬೀದರ್‌: ಸರ್ಕಾರದ ವಿವಿಧ ನಿಗಮ, ಮಂಡಳಿಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ನಗರದ 15 ಪರೀಕ್ಷಾ ಕೇಂದ್ರಗಳಲ್ಲಿ ಭಾನುವಾರ ಬಿಗಿ ಭದ್ರತೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಯಿತು.

ಜಿಲ್ಲಾಡಳಿತವು ಎಲ್ಲಾ ಪರೀಕ್ಷಾ ಕೇಂದ್ರಗಳ 200 ಮೀಟರ್‌ ಸುತ್ತ 144 ಕಲಂ ನಿಷೇಧಾಜ್ಞೆ ಹೇರಿತು. ಕೇಂದ್ರಗಳ ಸುತ್ತಲಿನ ಝಿರಾಕ್ಸ್‌ ಮಳಿಗೆ, ಕಂಪ್ಯೂಟರ್‌ ಕೇಂದ್ರಗಳನ್ನು ಮುಚ್ಚಿಸಲಾಗಿತ್ತು. ಕೇಂದ್ರಗಳ ಸುತ್ತ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ಪರೀಕ್ಷೆ ಬರೆಯಲು ಬಂದಿದ್ದ ಪ್ರತಿಯೊಬ್ಬ ಅಭ್ಯರ್ಥಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಒಬ್ಬೊಬ್ಬರಂತೆ ಕೇಂದ್ರದೊಳಗೆ ಬಿಟ್ಟರು. ಶರ್ಟ್‌, ಪ್ಯಾಂಟ್‌, ಕಿವಿ, ಕೂದಲು ಹೀಗೆ ಪ್ರತಿಯೊಂದನ್ನು ಪರಿಶೀಲಿಸಿ ಅಕ್ರಮಕ್ಕೆ ಆಸ್ಪದವಾಗದಂತೆ ನೋಡಿಕೊಂಡರು.

ಬೆಳಿಗ್ಗೆ ನಡೆದ ಮೊದಲ ಪತ್ರಿಕೆಗೆ ಒಟ್ಟು 5,388 ಅಭ್ಯರ್ಥಿಗಳು ಹೆಸರು ನೋಂದಣಿ ಮಾಡಿಸಿಕೊಂಡಿದ್ದರು. ಈ ಪೈಕಿ 2,101 ಜನ ಪರೀಕ್ಷೆಗೆ ಹಾಜರಾದರೆ, 3,287 ಜನ ಗೈರಾದರು.

ಅಭ್ಯರ್ಥಿಯ ಶರ್ಟ್‌ ಕಾಲರ್‌ ಪರಿಶೀಲಿಸಿದ ಪೊಲೀಸರು
ಅಭ್ಯರ್ಥಿಯ ಶರ್ಟ್‌ ಕಾಲರ್‌ ಪರಿಶೀಲಿಸಿದ ಪೊಲೀಸರು

ಇನ್ನು, ಮಧ್ಯಾಹ್ನ ನಡೆದ ಪರೀಕ್ಷೆ 5,173 ಜನ ಹೆಸರು ನೋಂದಾಯಿಸಿದ್ದರು. ಇದಕ್ಕೆ 3,167 ಜನ ಗೈರಾದರೆ, 2,006 ಜನ ಪರೀಕ್ಷೆ ಬರೆದರು. ‘ಭಾನುವಾರ ಪರೀಕ್ಷೆಗಳು ಸುಸೂತ್ರವಾಗಿ ನಡೆದಿವೆ. ಯಾವುದೇ ರೀತಿಯ ಅಕ್ರಮಗಳು ನಡೆದಿಲ್ಲ’ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT