ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಪತ್ರಿಕಾ ಛಾಯಾಗ್ರಾಹಕ ತಾಂದಳೆ ಇನ್ನಿಲ್ಲ

ದೇಶದ ಎಲ್ಲ ಪ್ರಧಾನಿಗಳ ಛಾಯಾಚಿತ್ರ ಕ್ಲಿಕ್ಕಿಸಿದ ಹಿರಿಮೆ
Last Updated 4 ಮೇ 2021, 4:53 IST
ಅಕ್ಷರ ಗಾತ್ರ

ಬೀದರ್: ಪತ್ರಿಕಾ ಹಿರಿಯ ಛಾಯಾಗ್ರಾಹಕ ಮಾರುತಿರಾವ್ ತಾಂದಳೆ (80) ಸೋಮವಾರ ಇಲ್ಲಿ ನಿಧನರಾದರು.

ಕೋವಿಡ್ ಸೋಂಕಿಗೆ ಒಳಗಾಗಿದ್ದ ಅವರು ಬ್ರಿಮ್ಸ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.

ಅವರಿಗೆ ಪತ್ನಿ, ಪುತ್ರ ಇದ್ದಾರೆ. ನಗರದ ನರಸಿಂಹ ಝರಣಿ ಸಮೀಪದ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಿತು.

ಜಿಲ್ಲೆಯಲ್ಲಿ ಚಿರಪರಿಚಿತ: ಈ ಭಾಗದ ಪತ್ರಿಕಾ ಹಿರಿಯ ಛಾಯಾಗ್ರಾಹಕರಲ್ಲಿ ಒಬ್ಬರಾಗಿದ್ದ ಮಾರುತಿರಾವ್ ತಾಂದಳೆ ಜಿಲ್ಲೆಯಲ್ಲಿ ಚಿರಪರಿಚಿತರಾಗಿದ್ದರು. ಬಾಲ್ಯದಿಂದಲೇ ಛಾಯಾಚಿತ್ರ ಆಸಕ್ತಿ ಬೆಳೆಸಿಕೊಂಡಿದ್ದರು. ಠಾಕೂರ್ ಅವರ ಬಳಿ ಫೊಟೊಗ್ರಾಫಿ ಕಲಿತಿದ್ದರು. ಆರು ದಶಕಗಳ ಕಾಲ ಛಾಯಾಚಿತ್ರ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು.

ರಾಜ್ಯಮಟ್ಟದ ಕನ್ನಡ ದಿನಪತ್ರಿಕೆಗಳಲ್ಲಿ ಛಾಯಾಗ್ರಾಹಕರಾಗಿ ಕೆಲಸ ನಿರ್ವಹಿಸಿದ್ದರು. ಸದ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸುತ್ತಿದ್ದ ಅವರು, ಜೀವನದುದ್ದಕ್ಕೂ ಶ್ರಮ ಸಂಸ್ಕೃತಿಯನ್ನು ಪಾಲಿಸಿಕೊಂಡು ಬಂದಿದ್ದರು.

ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರಿಂದ ಹಿಡಿದು ಈಗಿನ ಪ್ರಧಾನಿ ನರೇಂದ್ರ ಮೋದಿ ಅವರವರೆಗೆ ಎಲ್ಲ ಪ್ರಧಾನಿಗಳ, ಗಣ್ಯರ ಛಾಯಾಚಿತ್ರ ಕ್ಲಿಕ್ಕಿಸಿದ ಹಿರಿಮೆ ‘ಮಾರುತಿರಾವ್ ಮಾಮಾ’ ಎಂದೇ ಖ್ಯಾತರಾಗಿದ್ದ ಅವರದ್ದಾಗಿತ್ತು.

ಪ್ರಶಸ್ತಿ, ಸನ್ಮಾನಗಳಿಂದ ದೂರವೇ ಉಳಿದಿದ್ದರು. ಅಂಚೆ ಇಲಾಖೆ ಅವರ ಛಾಯಾಚಿತ್ರಗಳ ಪ್ರದರ್ಶನ ಏರ್ಪಡಿಸಿ, ಅವರ ಹೆಸರಿನ ಅಂಚೆ ಚೀಟಿ ಹೊರ ತಂದು, ಅವರನ್ನು ಗೌರವಿಸಿತು. ನೇರ ನಡೆ, ನುಡಿಗೆ ಹೆಸರಾಗಿದ್ದರು. ಅಷ್ಟೇ ಸ್ವಾಭಿಮಾನಿಯೂ ಆಗಿದ್ದರು. ಬಿ.ಎಸ್ಸಿ ಪದವೀಧರರಾಗಿದ್ದ ಅವರು ಕೆಲ ಕಾಲ ಶಿಕ್ಷಕರಾಗಿ ಕೂಡ ಕೆಲಸ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT