ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಷೇಧಿತ ಮಾದಕದ್ರವ್ಯ ವಶ: ಐವರ ಬಂಧನ

Last Updated 2 ಸೆಪ್ಟೆಂಬರ್ 2021, 4:10 IST
ಅಕ್ಷರ ಗಾತ್ರ

ಬೀದರ್‌: ಮಾರ್ಕೆಟ್‌ ಠಾಣೆಯ ಪೊಲೀಸರು ಮಂಗಳವಾರ ನಗರದ ಕರ್ನಾಟಕ ಕಾಲೇಜಿನ ಮುಂಭಾಗದಲ್ಲಿ ನಿಂತಿದ್ದ ಕಾರೊಂದರ ಮೇಲೆ ದಾಳಿ ನಡೆಸಿ ₹ 1.29 ಲಕ್ಷ ಮೌಲ್ಯದ ನಿಷೇಧಿತ ಮಾದಕ ದ್ರವ್ಯಮಿಶ್ರಿತ ಔಷಧ ವಶಪಡಿಸಿಕೊಂಡು ಐವರನ್ನು ಬಂಧಿಸಿದ್ದಾರೆ.

ಔಷಧ ವಿತರಕ ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಸಾತಖೇಡದ ಮಂಜುನಾಥ ಮಾಲಿಪಾಟೀಲ, ಔಷಧ ವಿತರಕರ ಅಂಗಡಿಯ ಕೆಲಸಗಾರ, ಸಿಂದಗಿಯ ವೀರೇಶ ವಡಗೇರೆ, ಕಲಬುರ್ಗಿಯ ಸುಭಾಷ ನಾಸಿ, ಬೀದರ್‌ನ ಮುಲ್ತಾನಿ ಕಾಲೊನಿಯ ಅಕ್ರಂ ಪಾಶಾ ಅಬ್ದುಲ್ ಹಮೀದ್‌ ಹಾಗೂ ಕಾರು ಚಾಲಕ ಕಲಬುರ್ಗಿಯ ಭಗವಂತ ಮಂದೆವಾಲ್ ಎಂಬುವರನ್ನು ಬಂಧಿಸಲಾಗಿದೆ. ಔಷಧಿ ಖರೀದಿಸಲು ಬಂದವರು ಪರಾರಿಯಾಗಿದ್ದಾರೆ.

ನಿಷೇಧಿತ ಮಾದಕ ದ್ರವ್ಯ ಇದ್ದ ₹ 92,380 ಮೌಲ್ಯದ 620 ಬಾಟಲಿಗಳು, ₹ 37,364 ಬೆಲೆಯ 6 ಸಾವಿರ ಮಾತ್ರೆಗಳು ಹಾಗೂ ಔಷಧ ಸಾಗಣೆಗೆ ಬಳಸಿದ ಮಾರುತಿ ಕಾರ್‌ ವಶಪಡಿಸಿಕೊಳ್ಳಲಾಗಿದೆ. ಮಾರ್ಕೆಟ್‌ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಿಪಿಐ ಫಾಲಾಕ್ಷಯ್ಯ ಹಿರೇಮಠ, ಸಹಾಯಕ ಔಷಧ ನಿಯಂತ್ರಕ ಶರಣಬಸಪ್ಪ, ಮಾರ್ಕೆಟ್ ಪೊಲೀಸ್ ಠಾಣೆಯ ಸಂತೋಷ, ನಗರ ಪೊಲೀಸ್ ಠಾಣೆಯ ನಾಗನಾಥ ದಾಳಿ
ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT