ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಮನಾಬಾದ್; ದಲಿತರ ದಿನಾಚರಣೆ

Last Updated 16 ಡಿಸೆಂಬರ್ 2019, 13:03 IST
ಅಕ್ಷರ ಗಾತ್ರ

ಹುಮನಾಬಾದ್: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಭಾನುವಾರ ದಲಿತರ ದಿನಾಚರಣೆ ನಡೆಯಿತು.

ಡಿವೈಎಸ್ಪಿ ಎಸ್.ಬಿ.ಮಹೇಶ್ವರಪ್ಪ ಮಾತನಾಡಿ,‘ದಲಿತರ ಮೇಲಿನ ದೌರ್ಜನ್ಯ ತಡೆಗಟ್ಟುವ ಉದ್ದೇಶದಿಂದ ಪ್ರತಿ ತಿಂಗಳು ಎರಡನೇ ಭಾನುವಾರ ದಲಿತರ ದಿನಾಚರಣೆ ಆಚರಿಸುವ ಮೂಲಕ ಕುಂದು ಕೊರತೆಗಳನ್ನು ಆಲಿಸಲಾಗುತ್ತಿದೆ’ ಎಂದರು.

ಎಲ್ಲ ಗ್ರಾಮಗಳಲ್ಲಿ ಸೌಹಾರ್ದತೆಯಿಂದ ಬದುಕಬೇಕು. ಜಾತಿ ನಿಂದನೆ ಮಾಡಿದರೆ, ದಲಿತ ಸಮುದಾಯದವರು ದೂರು ನೀಡಬೇಕು ಎಂದು ತಿಳಿಸಿದರು.

ಸಿಪಿಐ ಜೆ.ಎಸ್.ನ್ಯಾಮಗೌಡರು ಮಾತನಾಡಿ,‘ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದೂರು ಸ್ವೀಕರಿಸದಿದ್ದರೆ, ಮೇಲಾಧಿಕಾರಿಗಳ ಗಮನಕ್ಕೆ ತರಬೇಕು’ ಎಂದರು.

ಪಿಎಸ್‍ಐ ರವಿಕುಮಾರ ಮಾತನಾಡಿ ದೌರ್ಜನ್ಯ ತಡೆ ಕಾಯ್ದೆ ಕುರಿತು ತಿಳಿಸಿದರು.

ಹಿರಿಯ ಸಾಮಾಜಿಕ ಕಾರ್ಯಕರ್ತ ಸುಭಾಷ ಆರ್ಯ, ದಲಿತ ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ವೀರಪ್ಪ ಧುಮನಸೂರ, ಭೀಮ್‌ ಆರ್ಮಿ ತಾಲ್ಲೂಕು ಘಟಕದ ಅಧ್ಯಕ್ಷ ಅನಿಲ್ ದೊಡ್ಡಿ, ದಲಿತ ಸಂಘಟನೆ ಯುವ ಮುಖಂಡ ಲಕ್ಷ್ಮಿಪುತ್ರ ಮಾಳಗೆ, ಸುರೇಶ ಘಾಂಗ್ರೆ, ಬಾಬುರಾವ ಜಾನವೀರ, ಸುರೇಶಕುಮಾರ, ವಿಜಯಕುಮಾರ ಜಂಜೀರ, ರಾಹುಲ ಜಾನವೀರ ಹಾಗೂ ಸತೀಶ ಪಾಂಡೆ ಮೊಳಕೇರಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT