ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂವರ ಸಾವು, 134 ಮಂದಿಗೆ ಸೋಂಕು

ಬೀದರ್‌ನ ಪ್ರಧಾನ ಅಂಚೆ ಕಚೇರಿ ಶೀಲ್‌ಡೌನ್‌
Last Updated 12 ಆಗಸ್ಟ್ 2020, 15:20 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯಲ್ಲಿ ಬುಧವಾರ 134 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಮತ್ತೆ ಮೂವರು ಮೃತಪಟ್ಟಿದ್ದು, ಕೋವಿಡ್‌ ವೈರಾಣುವಿನಿಂದ ಮೃತಪಟ್ಟವರ ಸಂಖ್ಯೆ 107ಕ್ಕೆ ಏರಿದೆ.

ಜಿಲ್ಲೆಯ 65 ವರ್ಷದ ಪುರುಷ ಕಫ ಹಾಗೂ ಉಸಿರಾಟ ಸಮಸ್ಯೆಯಿಂದ ಆಗಸ್ಟ್ 9 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ಅದೇ ದಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. 64 ವರ್ಷದ ಪುರುಷ ಜ್ವರ ಹಾಗೂ ಉಸಿರಾಟ ತೊಂದರೆಯಿಂದ ಆಗಸ್ಟ್ 10 ರಂದು ಆಸ್ಪತ್ರೆಗೆ ದಾಖಲಾಗಿ, ಅಂದೇ ಮೃತಪಟ್ಟಿದ್ದರು.

70 ವರ್ಷದ ಮಹಿಳೆ ಕಫ ಹಾಗೂ ಉಸಿರಾಟ ಸಮಸ್ಯೆಯಿಂದ ಆಗಸ್ಟ್ 6 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ಆಗಸ್ಟ್ 10 ರಂದು ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದರು. ಮೂವರ ಗಂಟಲು ದ್ರವ ಮಾದರಿ ಪಡೆದು ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಬುಧವಾರ ವರದಿ ಪಾಸಿಟಿವ್‌ ಬಂದಿದೆ.

ಈವರೆಗೆ ಕೋವಿಡ್‌ ಸೋಂಕಿನಿಂದಾಗಿಯೇ 103 ಜನರು ಹಾಗೂ ಕೋವಿಡೇತರ ಕಾರಣದಿಂದ 4 ಮಂದಿ ಸೇರಿ ಒಟ್ಟು 107 ಜನರು ಸಾವಿಗೀಡಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಬೀದರ್‌ ಪ್ರಧಾನ ಅಂಚೆ ಕಚೇರಿಯಲ್ಲಿ ನಾಲ್ವರು ಸಿಬ್ಬಂದಿಗೆ ಕೋವಿಡ್‌ ಸೋಂಕು ಧೃಡಪಟ್ಟಿದೆ. ಕಚೇರಿಯ 85 ಸಿಬ್ಬಂದಿಯ ಗಂಟಲು ದ್ರವ ಮಾದರಿ ಪಡೆದು ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಎರಡು ದಿನಗಳ ಮಟ್ಟಿಗೆ ಪ್ರಧಾನ ಅಂಚೆ ಕಚೇರಿಯನ್ನು ಶೀಲ್‌ಡೌನ್‌ ಮಾಡಲಾಗಿದೆ.

ಬೀದರ್‌ನ ಅಲ್ಲಂಪ್ರಭುನಗರದ 32 ವರ್ಷದ ಪುರುಷ, ಶರಣನಗರದ ನಾಲ್ಕು ವರ್ಷದ ಬಾಲಕಿ, ಇಡೆನ್‌ ಕಾಲೊನಿಯ 30 ವರ್ಷದ ಪುರುಷ, ಗುಂಪಾದ 40, 47 ವರ್ಷದ ಪುರುಷ, ಶಾಹಿನ್‌ ಕಾಲೇಜಿನ 40 ವರ್ಷದ ಮಹಿಳೆ, 37 ವರ್ಷದ ಪುರುಷ, ಶಿವನಗರದ 57, 37 , 68 ವರ್ಷದ ಪುರುಷ, 50 ವರ್ಷದ ಮಹಿಳೆ, ಶಿವನಗರ ಗವಾಟಿ ಲೇಔಟ್‌ನ 50 ವರ್ಷದ ಪುರುಷ, ಜೆ.ಪಿ. ಕಾಲೊನಿಯ 34 ವರ್ಷದ ಮಹಿಳೆ, ನೌಬಾದ್‌ನ 30, 32 ವರ್ಷದ ಪುರುಷ, ಶಹಾಗಂಜ್‌ನ 45 ವರ್ಷದ ಮಹಿಳೆ, 55 ವರ್ಷದ ಪುರುಷ, ಮಂಗಲಪೇಟದ 20, 65 ವರ್ಷದ ಪುರುಷ, ಕುಂಬಾರವಾಡದ 23 ವರ್ಷದ ಮಹಿಳೆಗೆ ಸೋಂಕು ತಗುಲಿದೆ.

ಬೀದರ್‌ ತಾಲ್ಲೂಕಿನ ಮನ್ನಳ್ಳಿಯ 59 ವರ್ಷದ ಪುರುಷ, ಗಾದಗಿಯ 22 ವರ್ಷದ ಮಹಿಳೆ, ಜನವಾಡ ಶಿವಾಜಿ ಚೌಕ್‌ನ 48 ವರ್ಷದ ಮಹಿಳೆ, ಚಿಟ್ಟಾದ 30 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

ಹುಮನಾಬಾದ್‌ನ 32 ವರ್ಷದ ಪುರುಷ, 15 ವರ್ಷದ ಬಾಲಕಿ, ಬಸವನಗರದ 62 ವರ್ಷದ ಮಹಿಳೆ, ಹಳ್ಳಿಖೇಡ(ಬಿ) 25, 45, 30, 52 ವರ್ಷದ ಪುರುಷ, 52, 20 ಹಾಗೂ 90 ವರ್ಷದ ಮಹಿಳೆ, ಚಿಟಗುಪ್ಪ ತಾಲ್ಲೂಕಿನ ನಿರ್ಣಾದ 8 ಪುರುಷರು ಹಾಗೂ 20 ಮಹಿಳೆಯರಿಗೆ ಕೋವಿಡ್‌ ಸೋಂಕು ತಗುಲಿದೆ.

ಕಮಲನಗರ ತಾಲ್ಲೂಕಿನ ಸಂಗಮದ 42 ವರ್ಷದ ಪುರುಷ, ಸಾತಗಾಂವದ 27 ವರ್ಷದ ಮಹಿಳೆ, ಔರಾದ್‌ ತಾಲ್ಲೂಕಿನ, ಸಂತಪುರದ 45 ವರ್ಷದ ಪುರುಷ, ಅಶೋಕನಗರ ತಾಂಡಾದ 70 ವರ್ಷದ ಮಹಿಳೆ, ರಕ್ಷಾಳದ 70 ವರ್ಷದ ಪುರುಷ, ಹಕ್ಯಾಳದ 26 ವರ್ಷದ ಪುರುಷ, ಭಾಲ್ಕಿಯ 34 ವರ್ಷದ ಮಹಿಳೆಗೆ ಮಹಿಳೆ ಸೋಂಕು ದೃಢಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT